* ಹರಿಯಾಣದ ಉದಯೋನ್ಮುಖ ಶೂಟರ್ ಕನಕ್ ಅವರು, ಜರ್ಮನಿಯ ಝೂಲ್ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ನಲ್ಲಿ ಮೇ 21 ರಂದು (ಬುಧವಾರ) ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.* ಕಳೆದ ವರ್ಷ ಲಿಮಾದಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತೆ ಕನಕ್, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್ನಲ್ಲಿ 239 ಅಂಕಗಳನ್ನು ಗಳಿಸಿ ಹಳದಿ ಲೋಹವನ್ನು ಪಡೆದರು.* ಎರಡು ಬಾರಿ ಒಲಿಂಪಿಯನ್ ಮತ್ತು ಹಾಲಿ ಯುರೋಪಿಯನ್ ಚಾಂಪಿಯನ್ ಮೊಲ್ಡೊವಾದ ಅನ್ನಾ ಡಲ್ಸೆ ಅವರನ್ನು 1.7 ಅಂಕಗಳಿಂದ ಹಿಂದಿಕ್ಕಿದರು. ಚೈನೀಸ್ ತೈಪೆಯ ಚೆನ್ ಯೆನ್-ಚಿಂಗ್ ಕಂಚಿನ ಪದಕ ಗೆದ್ದರು. ಏತನ್ಮಧ್ಯೆ, ಮತ್ತೊಬ್ಬ ಭಾರತೀಯ ಶೂಟರ್ ಪ್ರಾಚಿ ಐದನೇ ಸ್ಥಾನ ಪಡೆದರು. * ಕನಕ್ ಎಂಟು ಸ್ಪರ್ಧಿಗಳಿದ್ದ, 24 ಶಾಟ್ಗಳ ಫೈನಲ್ನಲ್ಲಿ 239 ಪಾಯಿಂಟ್ಸ್ ಕಲೆಹಾಕಿದರು. ಎರಡು ಬಾರಿಯ ಒಲಿಂಪಿಯನ್ ಮಾಲ್ಡೋವಾದ ಅನ್ನಾ ಡುಲ್ಸೆ 1.7 ಪಾಯಿಂಟ್ ಅಂತರದಿಂದ ಎರಡನೇ ಸ್ಥಾನಕ್ಕೆ ಸರಿದರು. ಚೀನಾ ತೈಪೆಯ ಚೆನ್ ಯೆನ್–ಚಿಂಗ್ ಕಂಚಿನ ಪದಕ ಪಡೆದರು.* ಲಿಮಾ (ಪೆರು)ದಲ್ಲಿ 2024ರಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸ್ಪರ್ಧಿ ಬೆಳ್ಳಿ ಪದಕ ಗೆದ್ದಿದ್ದರು.