* 2020ರ ಅಂತರರಾಷ್ಟ್ರೀಯ ರಸ್ತೆ ಒಕ್ಕೂಟದ ಅಂಕಿ ಅಂಶಗಳ ಆಧಾರದಲ್ಲಿ ಸಿದ್ಧಪಡಿಸಲಾದ ರೋಡ್ ಟ್ರಾನ್ಸ್ ಪೋರ್ಟ್ ಈಯರ್ ಬುಕ್ ನ ವರದಿಯ ಪ್ರಕಾರ ವಿಶ್ವದಲ್ಲೇ ಗರಿಷ್ಠ ನೋಂದಾಯಿತ ದ್ವಿಚಕ್ರ ವಾಹನಗಳನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. * ಈ ವರದಿಯ ಪ್ರಕಾರ ಇಂಡೋನೇಷ್ಯಾ ಎರಡನೇ ಸ್ಥಾನದಲ್ಲಿದೆ.* ಹೆಚ್ಚು ದ್ವಿಚಕ್ರ ವಾಹನ ಹೊಂದಿರುವ ಭಾರತದ ರಾಜ್ಯಗಳ ಪೈಕಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಮತ್ತು ತಮಿಳುನಾಡು ಕ್ರಮವಾಗಿ 1, 2 ಮತ್ತು 3 ಸ್ಥಾನಗಳಲ್ಲಿವೆ.* ಪ್ರಯಾಣಿಕರ ಕಾರುಗಳ ಸಂಖ್ಯೆಯಲ್ಲಿ ಭಾರತ ಎಂಟನೇ ಸ್ಥಾನದಲ್ಲಿದ್ದು, ಚೀನಾ, ಅಮೆರಿಕ ಹಾಗೂ ಜಪಾನ್ ಮೊದಲ ಮೂರು ಸ್ಥಾನಗಳನ್ನು ಹಂಚಿಕೊಂಡಿವೆ.