* ಕ್ಯೂಎಸ್ ಗ್ಲೋಬಲ್ ರ್ಯಾಂಕಿಂಗ್ನಲ್ಲಿ ಮೂವರು ಭಾರತೀಯ ಐಐಎಂಗಳು ವಿಶ್ವದ ಟಾಪ್ 100 ಬ್ಯುಸಿನೆಸ್ ಸ್ಕೂಲ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.* ಬೆಂಗಳೂರಿನ ಐಐಎಂಗೆ 52ನೇ ಸ್ಥಾನ, ಅಹಮದಾಬಾದ್ ಐಐಎಂಗೆ 58ನೇ ಹಾಗೂ ಕಲ್ಕತ್ತಾದ ಐಐಎಂಗೆ 64ನೇ ಸ್ಥಾನ ದೊರಕಿದೆ.* ಈ ರ್ಯಾಂಕಿಂಗ್ನಲ್ಲಿ 80 ದೇಶಗಳ 390ಕ್ಕೂ ಹೆಚ್ಚು ಮ್ಯಾನೇಜ್ಮೆಂಟ್ ಸಂಸ್ಥೆಗಳನ್ನು ಪರಿಗಣಿಸಲಾಗಿದೆ. ವಾಕ್ಸೆನ್ ಸ್ಕೂಲ್ ಆಫ್ ಬ್ಯುಸಿನೆಸ್ 26ನೇ ಸ್ಥಾನ ಪಡೆದು, ಏಷ್ಯಾದ ನಂ.1 ಮ್ಯಾನೇಜ್ಮೆಂಟ್ ಸಂಸ್ಥೆಯಾಗಿ ಹೊರಹೊಮ್ಮಿದೆ.* ಅಮೆರಿಕದ ಬ್ಯುಸಿನೆಸ್ ಸ್ಕೂಲ್ಗಳು ಸದಾ ಅಗ್ರ ಸ್ಥಾನಗಳನ್ನು ಕಾಪಾಡಿಕೊಂಡಿವೆ. ವಾರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್ 5 ವರ್ಷಗಳ ಬಳಿಕ ಮತ್ತೆ ನಂ.1 ಸ್ಥಾನಕ್ಕೇರಿದೆ.* ಭಾರತದ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳು ಇತ್ತೀಚೆಗೆ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ವಿಶೇಷ.