* ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ನ್ಯಾನೋಫ್ಯಾಬ್ರಿಕೇಷನ್ ಘಟಕವು, ಸಿಲಿಕಾನ್ ರಹಿತ ಕಂಪ್ಯೂಟರ್ ಅಭಿವೃದ್ಧಿಪಡಿಸಿದೆ. ಸಿಎಂಒಎಸ್ (Complementary Metal-Oxide Semiconductor) ತಂತ್ರಜ್ಞಾನವನ್ನು ಆಧಾರವಾಗಿ ಬಳಸಲಾಗಿದೆ.* ಈ ಸಾಧನೆಯಲ್ಲಿ ಕಾಗದದಷ್ಟು ತೆಳುವಾದ 2ಡಿ ವಸ್ತುಗಳನ್ನು ಉಪಯೋಗಿಸಿ, ಸಿಲಿಕಾನ್ಬಳಕೆಯ ಅಗತ್ಯವಿಲ್ಲದಂತೆ ಮಾಡಲಾಗಿದೆ. ಸಪ್ತರ್ಷಿ ದಾಸ್ ನೇತೃತ್ವದ ಸಂಶೋಧಕರ ತಂಡ ಈ ಪ್ರಗತಿಗೆ ಕಾರಣವಾಗಿದೆ.* ಸಿಲಿಕಾನ್ ಶಕ್ತಿವಂತ ಮತ್ತು ಅಗ್ಗದ ವಸ್ತುವಾಗಿದ್ದರೂ, ಉಪಕರಣಗಳ ಗಾತ್ರದ ಚಿಕ್ಕದಾಗುತ್ತಿರುವ ನಿಟ್ಟಿನಲ್ಲಿ ಇದರ ಮಿತಿಗಳು ಎದುರಾಗುತ್ತಿವೆ. ಸಿಲಿಕಾನ್ಅನ್ನು ಇನ್ನಷ್ಟು ಸಣ್ಣಗೊಳಿಸಲು ಸಾಧ್ಯವಿಲ್ಲದ ಕಾರಣ ಪರ್ಯಾಯ ಅಗತ್ಯವಾಯಿತು.* ಈ ಹೊಸ 2ಡಿ ವಸ್ತು ಬಳಕೆಯು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕ್ರಾಂತಿ ತರಬಲ್ಲದು. ಭವಿಷ್ಯದಲ್ಲಿ ಸಿಲಿಕಾನ್ಗಾಗಿ ಸರಿಯಾದ ಪರ್ಯಾಯವಾಗಿ ಇದನ್ನು ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ.