Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಿಶ್ವದ ಮೊದಲ ಸೇನೆ: ರಾಮ್ಜೆಟ್ ಚಾಲಿತ ಫಿರಂಗಿ ಶೆಲ್ ಬಳಸಲಿರುವ ಭಾರತೀಯ ಸೇನೆ
8 ಜನವರಿ 2026
➤ ಭಾರತೀಯ ಸೇನೆ ತನ್ನ ಫಿರಂಗಿ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿ,
ರಾಮ್ಜೆಟ್ ಚಾಲಿತ 155 ಎಂಎಂ
ಫಿರಂಗಿ ಶೆಲ್ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲು ಸಿದ್ಧವಾಗಿದೆ. ಈ ತಂತ್ರಜ್ಞಾನವನ್ನು ಕಾರ್ಯಾಚರಣೆಯಲ್ಲಿ ಬಳಸುವ
ವಿಶ್ವದ ಮೊದಲ ಸೇನೆಯಾಗುವ ಹೆಗ್ಗಳಿಕೆಗೆ ಭಾರತೀಯ ಸೇನೆ ಪಾತ್ರವಾಗಲಿದೆ
.
➤ ಈ ಸುಧಾರಿತ ಫಿರಂಗಿ ಶೆಲ್ಗಳನ್ನು
ರಾಜಸ್ಥಾನದ ಪೋಖಾನ್ (Pokhran) ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ
. ಶೆಲ್ಗಳ ಅಭಿವೃದ್ಧಿಯನ್ನು
ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಮದ್ರಾಸ್
,
ಸೇನಾ ತಂತ್ರಜ್ಞಾನ ಮಂಡಳಿ (Army Technology Board – ATB)
ಸಹಯೋಗದೊಂದಿಗೆ ಕೈಗೊಳ್ಳಲಾಗಿದೆ.
➤ರಾಮ್ಜೆಟ್ ತಂತ್ರಜ್ಞಾನದ ವಿಶೇಷತೆ:
ರಾಮ್ಜೆಟ್ ಪ್ರೊಪಲ್ಷನ್ ತಂತ್ರಜ್ಞಾನವು ಈಗಾಗಲೇ ಕ್ಷಿಪಣಿಗಳಲ್ಲಿ ಬಳಸಲಾಗುತ್ತಿತ್ತು. ಆದರೆ, ಇದೇ ತಂತ್ರಜ್ಞಾನವನ್ನು
ಫಿರಂಗಿ ಶೆಲ್ಗಳಿಗೆ ಅನ್ವಯಿಸಿರುವುದು ಕ್ರಾಂತಿಕಾರಿ ಬೆಳವಣಿಗೆ
ಎಂದು ಪರಿಗಣಿಸಲಾಗಿದೆ.ರಾಮ್ಜೆಟ್ ಎಂಜಿನ್ಗಳು:
- ಗಾಳಿಯನ್ನು ಆಮ್ಲಜನಕವಾಗಿ ಬಳಸುತ್ತವೆ
- ಯಾವುದೇ ಚಲಿಸುವ ಭಾಗಗಳನ್ನು ಹೊಂದಿರುವುದಿಲ್ಲ
- ಫಿರಂಗಿಯಿಂದ ಹೊರಟ ಬಳಿಕ ನಿರಂತರ thrust ಒದಗಿಸುತ್ತವೆ
➤ ಕಾರ್ಯಕ್ಷಮತೆ ಮತ್ತು ಲಾಭ:
=>
155 ಎಂಎಂ ಸಾಮಾನ್ಯ ಶೆಲ್ಗಳಿಗಿಂತ
30–50%
ಹೆಚ್ಚುವರಿ ವ್ಯಾಪ್ತಿ
=> 80 ರಿಂದ 120 ಕಿಮೀ ವರೆಗೆ ಗುರಿ ತಲುಪುವ ಸಾಮರ್ಥ್ಯ
=> ಈಗಾಗಲೇ ಬಳಕೆಯಲ್ಲಿರುವ ಗನ್ಗಳಿಗೆ
ಮರು ವಿನ್ಯಾಸ ಅಗತ್ಯವಿಲ್ಲ
=> M777 ಅಲ್ಟ್ರಾ ಲೈಟ್ ಹೌಟ್ಸರ್
,
ATAGS
ಸೇರಿದಂತೆ ಎಲ್ಲಾ 155 ಎಂಎಂ ಗನ್ಗಳಿಗೆ ಹೊಂದಾಣಿಕೆ
=> ಕಡಿಮೆ ವೆಚ್ಚದಲ್ಲಿ
ದೀರ್ಘವ್ಯಾಪ್ತಿಯ, ನಿಖರ ದಾಳಿ ಸಾಮರ್ಥ್ಯ
➤ ಈ ಯೋಜನೆ
ಆತ್ಮನಿರ್ಭರ ಭಾರತ್ ಉಪಕ್ರಮದ ಅಡಿಯಲ್ಲಿ
ಅಭಿವೃದ್ಧಿಗೊಂಡಿದ್ದು, ದೇಶೀಯ ತಂತ್ರಜ್ಞಾನ ಮತ್ತು ಸಂಶೋಧನೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ. ಐಐಟಿ ಮದ್ರಾಸ್ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ
ಪ್ರಾಧ್ಯಾಪಕರು ಪಿ.ಎ. ರಾಮಕೃಷ್ಣ ಮತ್ತು ಎಸ್. ವರ್ಮಾ
ಅವರು ಈ ರಾಮ್ಜೆಟ್ ಚಾಲಿತ ಫಿರಂಗಿ ಶೆಲ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
➤ ಅಮೆರಿಕದ Boeing, ನಾರ್ವೆಯ Nammo ಮುಂತಾದ ಸಂಸ್ಥೆಗಳು ಪರೀಕ್ಷಾ ಹಂತದಲ್ಲಿ ಇದ್ದರೂ,
ಕಾರ್ಯಾಚರಣಾ ಹಂತದಲ್ಲಿ ಈ ತಂತ್ರಜ್ಞಾನ ಬಳಸದ ವಿಶ್ವದ ಮೊದಲ ದೇಶ ಭಾರತವಾಗಲಿದೆ
. ಇದರಿಂದ ಭಾರತದ ಡೀಪ್-ಸ್ಟ್ರೈಕ್ ಮತ್ತು ಕೌಂಟರ್ ಬ್ಯಾಟರಿ ಸಾಮರ್ಥ್ಯಗಳು ಬಹಳ ಮಟ್ಟಿಗೆ ವೃದ್ಧಿಯಾಗಲಿವೆ.
Take Quiz
Loading...