* ವಿಜ್ಞಾನಿಗಳು ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ವೈರಾಣು ವಿನ್ಯಾಸ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಇದು ಇ.ಕೊಲಿ (E. coli) ಬ್ಯಾಕ್ಟೀರಿಯಾವನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ.* ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಈ ಸಂಶೋಧನೆಯ ಪ್ರಕಾರ, AI ಸಂಪೂರ್ಣ ವಂಶವಾಹಿ (Genome) ರೂಪಿಸಲು ಯಶಸ್ವಿಯಾಗಿದೆ. ಇದು ಭವಿಷ್ಯದಲ್ಲಿ ಎಐ ಆಧಾರಿತ ಜೀವಿಯ ಸೃಷ್ಟಿಗೆ ದಾರಿ ಮಾಡಬಹುದು.* ‘Evo1’ ಮತ್ತು ‘Evo2’ ಎಂಬ AI ಮಾದರಿಗಳನ್ನು ಬಳಸಿ ವೈರಾಣುವಿನ ಡಿಎನ್ಎ ವಿನ್ಯಾಸ ಮಾಡಲಾಯಿತು.* ಇದರ ಫಲವಾಗಿ 11 ಜೀನ್ಗಳುಳ್ಳ 5,386 ನ್ಯೂಕ್ಲಿಯೊಟೈಡ್ಗಳ ಡಿಎನ್ಎ ಸಿದ್ಧವಾಯಿತು, ಇದು ಆತಿಥೇಯದಲ್ಲಿ ತನ್ನ ಪ್ರತಿರೂಪವನ್ನು ಸೃಷ್ಟಿಸುವ ಶಕ್ತಿ ಹೊಂದಿದೆ.* AI ಮಾದರಿ 20 ಲಕ್ಷಕ್ಕೂ ಹೆಚ್ಚು ವಂಶವಾಹಿ ಅಧ್ಯಯನ ನಡೆಸಿ, 302 ವೈರಾಣು ವಿನ್ಯಾಸ ನೀಡಿತು. ಪ್ರಯೋಗಾಲಯದಲ್ಲಿ ಅವುಗಳಲ್ಲಿ 16 ವೈರಾಣುಗಳು ಜೀವಂತವಾಗಿ ಇ.ಕೊಲಿಯನ್ನು ಯಶಸ್ವಿಯಾಗಿ ನಾಶಮಾಡಿದವು.* ಈ ಸಾಧನೆ ಚಿಕಿತ್ಸೆ ಕ್ಷೇತ್ರದಲ್ಲಿ ಹೊಸ ಮಾರ್ಗಗಳನ್ನು ತೆರೆಯುವ ಸಾಧ್ಯತೆ ಇದೆ. ಹಾಲಿ ಇರುವ ವೈರಾಣುಗಳಿಗೆ ಸಾಧ್ಯವಾಗದ ಕೆಲಸವನ್ನು AI ವಿನ್ಯಾಸಗೊಂಡ ವೈರಾಣುಗಳು ಮಾಡಿ ತೋರಿಸಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.