* ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ನವದೆಹಲಿಯಲ್ಲಿ ವಿಶ್ವದ ಮೊದಲ 100 ಪ್ರತಿಶತ ಎಥೆನಾಲ್ ಇಂಧನ ಹೊಂದಿರುವ ಕಾರನ್ನು ಆಗಸ್ಟ್ 29 ರಂದು ಬಿಡುಗಡೆ ಮಾಡಿದರು.* ಪರ್ಯಾಯ ಎಥೆನಾಲ್ ಇಂಧನದಲ್ಲಿ ಚಲಿಸುವ ಹಸಿರು ವಾಹನಗಳನ್ನು ತರಲು ಅವರು ವಾಹನ ತಯಾರಕರನ್ನು ಪ್ರೋತ್ಸಾಹಿಸುತ್ತಿದ್ದಾರೆ. * ಇಂದು ವಿಶ್ವದ ಮೊದಲ BS-VI (ಹಂತ-II), ಎಲೆಕ್ಟ್ರಿಫೈಡ್ ಫ್ಲೆಕ್ಸ್-ಇಂಧನ ವಾಹನವನ್ನು ಬಿಡುಗಡೆ ಮಾಡಿದ ಕಾರು ಆಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದರು. * 20 ರಷ್ಟು ಎಥೆನಾಲ್ ಮಿಶ್ರಣದ ಅನುಷ್ಠಾನದಿಂದ ಭಾರತವು ವಾರ್ಷಿಕವಾಗಿ 35 ಸಾವಿರ ಕೋಟಿ ಆಮದು ಖರ್ಚನ್ನು ಉಳಿಸಬಹುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತಿಳಿಸಿದ್ದಾರೆ.* ಪ್ರಸ್ತುತ ಭಾರತದ ತೈಲ ಆಮದು ವೆಚ್ಚ 16 ಲಕ್ಷ ಕೋಟಿ ರೂಪಾಯಿಗಳಷ್ಟಿದೆ.