* ಅಮೆರಿಕಾದ ವ್ಯಾಪಾರ ಪ್ರತಿನಿದಿಗಳ ಸಂಸ್ಥೆಯು (ಯುಎಸ್ ಟಿಆರ್) ಜನವರಿ 30 ರಂದು ಬಿಡುಗಡೆಯಾದ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ವಾರ್ಷಿಕ ಪಟ್ಟೆಯಲ್ಲಿ ಬೆಂಗಳೂರಿನ ಎಸ್.ಪಿ ರಸ್ತೆ ಮಾರುಕಟ್ಟೆಯ ಹೆಸರು (ಸದರ್‌ ಪತ್ರಪ್ಪ ರಸ್ತೆ) ಉಲ್ಲೇಖವಾಗಿದೆ.* ಜನವರಿ 30 ರಂದು ಬಿಡುಗಡೆಯಾದ US ಟ್ರೇಡ್ ರೆಪ್ರೆಸೆಂಟೇಟಿವ್‌ಗಳ ವಾರ್ಷಿಕ ಕುಖ್ಯಾತ ಮಾರುಕಟ್ಟೆ ಪಟ್ಟಿಯಲ್ಲಿ ಹೊಸದಿಲ್ಲಿಯ ಒಂದು ಸೇರಿದಂತೆ ಮೂರು ನಗರಗಳಲ್ಲಿ ಮೂರು ಭಾರತೀಯ ಮಾರುಕಟ್ಟೆಗಳು ಮತ್ತು ಮೂರು ಆನ್‌ಲೈನ್ ಮಾರುಕಟ್ಟೆಗಳು ಕಾಣಿಸಿಕೊಂಡಿವೆ, ಇದರಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ.* ಬೆಂಗಳೂರಿನ ಎಸ್.ಪಿ ರಸ್ತೆ ಮಾರುಕಟ್ಟೆ ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯು 2023ರಲ್ಲಿನ ವಿಶ್ವದ ಕುಖ್ಯಾತ 39 ಆನ್‌ಲೈನ್‌ ಮಾರ್ಕೆಟ್‌ ಮತ್ತು 33 ಭೌತಿಕ ಮಾರುಕಟ್ಟೆಗಳ ಪಟ್ಟಿ ಪ್ರಕಟಿಸಿದೆ. * ಮುಂಬೈನ ಹೀರಾ ಪನ್ನಾ ಮತ್ತು ನವದೆಹಲಿಯ ಪ್ರಸಿದ್ಧ ಕರೋಲ್ ಬಾಗ್ ಮಾರುಕಟ್ಟೆಗಳು ಈ ಪಟ್ಟಿಯಲ್ಲಿವೆ. ದೇಶದ ಜನಪ್ರಿಯ ಇ-ಕಾರ್ಮಸ್ ಉದ್ಯಮ ಇಂಡಿಯಾ ಮಾರ್ಟ್, ವೆಗಾಮೂವೀಸ್, ಡಬ್ಲ್ಯುಎಚ್‌ಎಂಸಿಎಸ್ ಸ್ಟಾಟರ್ಸ್ ಕೂಡ ಪಟ್ಟಿಯಲ್ಲಿವೆ.* 'ಈ ಮಾರುಕಟ್ಟೆಗಳಲ್ಲಿ ನಕಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಇದರಿಂದ ಕಾರ್ಮಿಕರು, ಗ್ರಾಹಕರು ಮತ್ತು ಸಣ್ಣ ವ್ಯಾಪಾರಕ್ಕೆ ಹಾನಿಯಾಗುತ್ತಿದೆ. ಅಮೆರಿಕದ ಆರ್ಥಿಕತೆಗೂ ಇಂತಹ ಮಾರುಕಟ್ಟೆಗಳು ಅಪಾಯ ತಂದೊಡುತ್ತಿವೆ' ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ವ್ಯಕ್ತಪಡಿಸಿದ್ದಾರೆ.* ಚೀನಾ ಮೂಲದ ಇ-ಕಾರ್ಮಸ್ ಮತ್ತು ವಾಣಿಜ್ಯ ಮಾರುಕಟ್ಟೆಯಾದ ಟಾವೊಬಾವೊ, ವಿಚಾಟ್, ಡಿಎಚ್‌ಗೇಟ್, ಪಿಂಡೂಡುವೋ ಈ ಪಟ್ಟಿಯಲ್ಲಿವೆ. * ಭಾರತೀಯ ಮೂರು ಮಾರುಕಟ್ಟೆಗಳೆಂದರೆ : ಮುಂಬೈನ ಹೀರಾ ಪನ್ನಾ, ನವದೆಹಲಿಯ ಕರೋಲ್ ಬಾಗ್‌ನಲ್ಲಿರುವ ಟ್ಯಾಂಕ್ ರಸ್ತೆ ಮತ್ತು ಬೆಂಗಳೂರಿನ ಸದರ್ ಪತ್ರಪ್ಪ ರಸ್ತೆ ಮಾರುಕಟ್ಟೆ.