• ವಾರಣಾಸಿಯ ಉಮರಹಾ ಪ್ರದೇಶದಲ್ಲಿ ನೆಲೆಸಿರುವ ಏಳು ಅಂತಸ್ತಿನ ಭವ್ಯವಾದ ಸ್ವರ್ವೇದ ಮಹಾಮಂದಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.• ಈ ಕಟ್ಟಡವು 20,000 ವ್ಯಕ್ತಿಗಳಿಗೆ ಆಸನ ಸಾಮರ್ಥ್ಯ ಹೊಂದಿದ್ದು ಧ್ಯಾನದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.• ಸದ್ಗುರು ಸದಾಫಲ್ ಜಿಯೋ ಜಿ ಮಹಾರಾಜ್ ರವರು ವಿಹಂಗಮ ಯೋಗ ಸಂಸ್ಥಾಪವನ್ನು ಸ್ಥಾಪಿಸಿ 100 ವರ್ಷ ತುಂಬಿದ ಆಚರಣೆಯ  ಪ್ರಯುಕ್ತ ಈ ಕಟ್ಟಡವನ್ನು ನಿರ್ಮಾಣ ಮಾಡಿದ್ದಾರೆ.• ಈ ದೇವಾಲಯವು 125 ದಳಗಳ ಕಮಲದ ಗುಮ್ಮಟಗಳನ್ನು ಒಳಗೊಂಡಿರುವ ಅದ್ಭುತ ವಿನ್ಯಾಸದಿಂದ ಅಲಂಕಾರಸಲ್ಪಟ್ಟಿದೆ.• ಈ ಕಟ್ಟಡವು ವಾರಣಾಸಿಯ ನಗರ ಕೇಂದ್ರದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಉಮರಹಾ ಪ್ರದೇಶದಲ್ಲಿ ಇದ್ದು, ಸುಮಾರು 3 ಲಕ್ಷ ಚದರ ಅಡಿ ವಿಸ್ತಾರವಾದ ಪ್ರದೇಶವನ್ನು ಹೊಂದಿದೆ.