* ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಪ್ರಸ್ತುತ 239 ಎಂಎಂಟಿಯಿಂದ 300 ಎಂಎಂಟಿ ಹಾಲು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಮಾರ್ಚ್ 25 ರಂದು ಲೋಕಸಭೆಯಲ್ಲಿ ತಿಳಿಸಿದರು.* 2014ರಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ಗೋಕುಲ್ ಮಿಷನ್ (RGM) ಮೂಲಕ ಹಾಲು ಉತ್ಪಾದನೆ ಶೇಕಡಾ 63.5 ರಷ್ಟು ಹೆಚ್ಚಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇದನ್ನು ಶೇಕಡಾ 15 ರಷ್ಟು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ.* ಹಾಲು ಉತ್ಪಾದನೆಯಲ್ಲಿ ದೇಶದ ಸುಮಾರು 10 ಕೋಟಿ ಜನರು ತೊಡಗಿಸಿಕೊಂಡಿದ್ದು, ಶೇಕಡಾ 75 ಮಹಿಳೆಯರ ಪಾಲಾಗಿದೆ.* ಪ್ರತಿ ವ್ಯಕ್ತಿಗೆ 471 ಗ್ರಾಂ ಹಾಲು ಲಭ್ಯವಿದೆ. ರಾಷ್ಟ್ರೀಯ ಗೋಕುಲ್ ಮಿಷನ್ ಸ್ಥಳೀಯ ತಳಿಗಳ ಅಭಿವೃದ್ಧಿ, ಗೋವಿನ ಆನುವಂಶಿಕ ಉನ್ನತೀಕರಣ ಮತ್ತು ಹಾಲು ಉತ್ಪಾದನೆ ಹೆಚ್ಚಿಸಲು ನಿಗದಿಯಾಗಿದೆ, ಇದರಿಂದ ರೈತರಿಗೆ ಹೆಚ್ಚಿನ ಲಾಭ ದೊರಕಲಿದೆ. 2014ರಲ್ಲಿ ಆರಂಭವಾದ ಈ ಯೋಜನೆ 2021-2026 ಅವಧಿಗೆ ವಿಸ್ತರಿಸಲಾಗಿದೆ.