* ವಿಶ್ವಬ್ಯಾಂಕ್ ನ ವರದಿಯ ಪ್ರಕಾರ ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6.3ರಷ್ಟು ಬೆಳವಣಿಗೆ ಕಾಣಲಿದ್ದು, ಭಾರತದಲ್ಲಿ ಹೂಡಿಕೆಯ ದರ ಹೆಚ್ಚುತ್ತಿರುವದರಿಂದ ಆರ್ಥಿಕ ಬೆಳವಣಿಗೆಯ ದರ ಹೆಚ್ಚಿನ ಮಟ್ಟದಲ್ಲಿ ಉಳಿಯಬಹುದು ಎಂದು ಹೇಳಿದೆ.* ಹೂಡಿಕೆ ಮತ್ತು ದೇಶಿ ಬೇಡಿಕೆಯಿಂದಾಗಿ ಈ ಪ್ರಮಾಣದ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ. ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿಯೂ ಪೂರೈಕೆ ಶೇ 6.3ರಷ್ಟು ಬೆಳವಣಿಗೆ ಕಾಣುವ ಅಂದಾಜನ್ನು ಅದು ಮಾಡಿತ್ತು.* ಆಹಾರ ವಸ್ತುಗಳ ದರವು ಸಹಜ ಸ್ಥಿತಿಗೆ ಮರಳಿದಂತೆ ಮತ್ತು ಸರ್ಕಾರದ ಕ್ರಮಗಳಿಂದಾಗಿ ಅಗತ್ಯ ವಸ್ತುಗಳ ಸುಧಾರಿಸುತ್ತಿದ್ದಂತೆಯೇ ಹಣದುಬ್ಬರವು ಕ್ರಮೇಣ ಇಳಿಕೆ ಕಾಣಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.