* ಐಕ್ಯೂಏರ್ನ ವಿಶ್ವ ವಾಯು ಗುಣಮಟ್ಟ ವರದಿ ಪ್ರಕಾರ, ಭಾರತ ಜಾಗತಿಕವಾಗಿ ಐದನೇ ಅತಿ ಕಲುಷಿತ ದೇಶವಾಗಿದ್ದು, ಹತ್ತು ಅತಿ ಕಲುಷಿತ ನಗರಗಳಲ್ಲಿ ಆರು ಭಾರತದಲ್ಲಿವೆ. ಸುಮಾರು 35% ಭಾರತೀಯ ನಗರಗಳ ಪಿಎಂ 2.5 ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯ(WHO) ಮಾರ್ಗಸೂಚಿಗಳನ್ನು ಹತ್ತು ಪಟ್ಟು ಮೀರಿಸಿದೆ.* 2024ರಲ್ಲಿ ಭಾರತವು ಪಿಎಂ 2.5 ಮಾಲಿನ್ಯದಲ್ಲಿ 7% ಇಳಿಕೆಯನ್ನು ಕಂಡು, ಸರಾಸರಿ 50.6 µg/m³(micrograms per cubic meter) ದಾಖಲಿಸಿತು. ಆದರೆ, ನವದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿ ಮುಂದುವರೆದಿದ್ದು, ಅದರ ವಾರ್ಷಿಕ ಸರಾಸರಿ 91.6 µg/m³ ಆಗಿದೆ.* ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಬೈರ್ನಿಹಾಟ್ 2024 ರಲ್ಲಿ ಜಾಗತಿಕವಾಗಿ ಅತ್ಯಂತ ಕಲುಷಿತ ನಗರವಾಗಿ ಹೊರಹೊಮ್ಮಿತು, ವಾರ್ಷಿಕ ಸರಾಸರಿ ಪಿಎಂ 2.5 ಸಾಂದ್ರತೆಯು 128.2 μg/m³ ನಷ್ಟಿದೆ.* ವರದಿಯ ಪ್ರಕಾರ, ವಿಶ್ವದ 20 ಅತಿ ಕಲುಷಿತ ನಗರಗಳಲ್ಲಿ 13 ಭಾರತದಲ್ಲಿವೆ.ದೇಶದ ಟಾಪ್ 10 ಅತಿ ಕಲುಷಿತ ನಗರಗಳು ಈ ಕೆಳಗಿನಂತಿವೆ:1. ಬೈರ್ನಿಹಾಟ್ (ಮೇಘಾಲಯ): 128.22. ದೆಹಲಿ (ದೆಹಲಿ ಯುಟಿ): 108.33. ಮುಲ್ಲನ್ಪುರ (ಪಂಜಾಬ್): 102.34. ಫರಿದಾಬಾದ್ (ಹರಿಯಾಣ): 101.25. ಲೋನಿ (ಉತ್ತರ ಪ್ರದೇಶ): 91.76. ನವದೆಹಲಿ (ದೆಹಲಿ ಯುಟಿ): 91.67. ಗುರುಗ್ರಾಮ್ (ಹರಿಯಾಣ): 87.48. ಗಂಗಾನಗರ (ರಾಜಸ್ಥಾನ): 86.69. ಗ್ರೇಟರ್ ನೋಯ್ಡಾ (ಉತ್ತರ ಪ್ರದೇಶ): 83.510. ಭಿವಾಡಿ (ರಾಜಸ್ಥಾನ): 83.1* ಭಾರತದ ಮಹಾನಗರಗಳಲ್ಲಿ, ದೆಹಲಿ 2024 ರಲ್ಲಿ ಅತಿ ಹೆಚ್ಚು ಒಟ್ಟಾರೆ ಎಕ್ಯೂಐ 108.3 ಅನ್ನು ದಾಖಲಿಸಿದೆ. ಕೋಲ್ಕತ್ತಾ 45.6 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದೆ, 2023ರ 47.8ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ ಮುಂಬೈ 2023 ರಲ್ಲಿ 43.8 ರಿಂದ 2024 ರಲ್ಲಿ 33.7 ಕ್ಕೆ ಇಳಿಕೆಯನ್ನು ಕಂಡಿದೆ.* 2024 ರಲ್ಲಿ ಹೈದರಾಬಾದ್ನ ಪಿಎಂ 2.5 ಮಟ್ಟವು 39.9 ರಿಂದ 30.6 ಕ್ಕೆ ಇಳಿದಿದೆ. ಬೆಂಗಳೂರು (28.6 ರಿಂದ 30.0) ಸ್ವಲ್ಪ ಹೆಚ್ಚಾಗಿದ್ದು, ಚೆನ್ನೈ (28.0 ರಿಂದ 26.0) ಇಳಿಕೆಯಾಗಿದೆ.