* ವಿಶ್ವಸಂಸ್ಥೆಯ ನಿಯಮಗಳ ಅಡಿ 1945ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ರೂಪಿತಗೊಂಡಿತು. ನೀತಿ ನಿರೂಪಣೆಯ ಕಾರ್ಯನಿರ್ವಹಿಸುವುದು ವಿಶ್ವಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.* ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA)ಯ ಆರಂಭಿಕ ಅಧಿವೇಶನವು 1946 ರ ಜನವರಿ 10 ರಂದು ಯುನೈಟೆಡ್ ಕಿಂಗ್ಡಂನ ಲಂಡನ್ನಲ್ಲಿರುವ 'ಮೆಥೋಡಿಸ್ಟ್ ಸೆಂಟ್ರಲ್ ಹಾಲ್' ನಲ್ಲಿ ನಡೆಯಿತು.* ಅಂಗವಾಗಿ UNGA ವಿಶ್ವಸಂಸ್ಥೆಯ ಎಲ್ಲಾ 193 ರಾಷ್ಟ್ರಗಳನ್ನು ಒಳಗೊಂಡಿರುತ್ತದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಮಸ್ಯೆ, ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ, ಅಂತಾರಾಷ್ಟ್ರೀಯ ಚರ್ಚೆಗೆ ಈ ಸಾಮಾನ್ಯಸಭೆ ಅನನ್ಯ ವೇದಿಕೆಯನ್ನು ಒದಗಿಸುತ್ತದೆ. ಯುನ್ಜಿಎ ವಿಶ್ವಸಂಸ್ಥೆಯ ಇತರ ಅಧೀನ ಸಂಸ್ಥೆಗಳಿಂದ ವರದಿಗಳನ್ನು ಸ್ವೀಕರಿಸುತ್ತದೆ ಮತ್ತು ನಿರ್ಣಯಗಳ ಮೂಲಕ ಶಿಫಾರಸು ಮಾಡುತ್ತದೆ.* UNGA ಪ್ರತಿವರ್ಷ ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗೆ ಸಭೆ ಸೇರುತ್ತದೆ. ಈ ಸಮಯದಲ್ಲಿ ಉನ್ನತ ಮಟ್ಟದ ವಿಷಯಾಧರಿತ ಚರ್ಚೆಗಳನ್ನು ಮಾಡಲಾಗುತ್ತದೆ. ಸಾಮಾನ್ಯಸಭೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ವಿಷಯಗಳ ಚರ್ಚೆ ನಡೆಯುತ್ತದೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸದಸ್ಯ ರಾಷ್ಟ್ರಗಳಿಗೆ ಅವಕಾಶವಿರುತ್ತದೆ.* ಚರ್ಚೆಯ ಮೊದಲ ದಿನ ಜನರಲ್ ಸೆಕ್ರೆಟರಿ ಸಂಘಟನೆಯ ಕೆಲಸದ ಕುರಿತು ತಮ್ಮ ವರದಿ ಪ್ರಸ್ತುತಪಡಿಸುತ್ತಾರೆ. ಮುಂದಿನ ಅಧಿವೇಶನ ಪ್ರಾರಂಭಕ್ಕೆ ಮುನ್ನ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಚರ್ಚೆಗಳು ನಡೆಯುತ್ತವೆ.* ಅಧಿವೇಶನದಲ್ಲಿ ಸಾಮಾನ್ಯಾ ಚರ್ಚೆ ಬಳಿಕ ತನ್ನ ಕಾರ್ಯಸೂಚಿಯಲ್ಲಿನ ವಸ್ತುನಿಷ್ಠ ಅಂಶಗಳನ್ನು ಪರಿಗಣಿಸಲಾಗುತ್ತದೆ ಹಾಗೂ ಇದರ ನಿರ್ವಹಣೆಗೆ ಆರು ಪ್ರಮುಖ ಸಮಿತಿಗಳನ್ನೂ ರಚಿಸಲಾಗಿದೆ.* ನಿಶ್ಯಸ್ತ್ರೀಕರಣ ಮತ್ತು ಅಂತಾರಾಷ್ಟ್ರೀಯ ಭದ್ರತಾ ಸಮಿತಿ, ಆರ್ಥಿಕ ಮತ್ತು ಹಣಕಾಸು ಸಮಿತಿ, ಸಾಮಾಜಿಕ, ಮಾನವೀಯ ಮತ್ತು ಸಾಂಸ್ಕೃತಿಕ ತನ್ನ ಸಮಿತಿ, ವಿಶೇಷ ರಾಜಕೀಯ ಮತ್ತು ವಸಾಹತುಶಾಹಿ ಸಮಿತಿ, ಆಡಳಿತಾತ್ಮಕ ಮತ್ತು ಬಜೆಟ್ ಸಮಿತಿ ಕಾನೂನು ಸಮಿತಿ ಈ ಸಮಿತಿಗಳು ತಮ್ಮ ಕಾರ್ಯಸೂಚಿಯ ಅಂಶಗಳಡಿ ವಿಷಯಗಳನ್ನು ಚರ್ಚಿಸುತ್ತವೆ ಹಾಗೂ ಕ್ರಮಕ್ಕಾಗಿ ಸಾಮಾನ್ಯಸಭೆಗೆ ಕರಡು ನಿರ್ಣಯ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಶಿಫಾರಸು ಮಾಡುತ್ತವೆ.