* ಇತ್ತೀಚೆಗೆ ಬಿಡುಗಡೆಯಾದ 'ವಿಶ್ವ ಸಾಮಾಜಿಕ ವರದಿ - 2025'ನಲ್ಲಿ ಜಾಗತಿಕ ಮಟ್ಟದಲ್ಲಿ ಏರುತ್ತಿರುವ ಆರ್ಥಿಕ ಅಸಮಾನತೆ, ಅಪನಂಬಿಕೆ ಮತ್ತು ಆರ್ಥಿಕ ಅಸ್ಥಿರತೆ ಕುರಿತು ಮುಖ್ಯ ವಿಚಾರಗಳನ್ನು ಹತ್ತಿರದಿಂದ ವಿಶ್ಲೇಷಿಸಲಾಗಿದೆ.* ವರದಿಯ ಪ್ರಕಾರ, ಜಗತ್ತಿನ ಶೇ.60ರಷ್ಟು ಜನರು ಆರ್ಥಿಕ ಅಭದ್ರತೆಯನ್ನು ಅನುಭವಿಸುತ್ತಿದ್ದು, ಮೂರನೇ ಎರಡರಷ್ಟು ರಾಷ್ಟ್ರಗಳಲ್ಲಿ ಆದಾಯ ಅಸಮಾನತೆ ಹೆಚ್ಚಾಗಿದೆ. ಶ್ರೀಮಂತರ ಶೇ.1ರಷ್ಟು ಜನರು ಜಗತ್ತಿನ ಶೇ.95ರಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂಬ ತೀವ್ರ ಅಂತರವನ್ನು ವರದಿ ಬಹಿರಂಗಪಡಿಸಿದೆ.* ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಂತಹ ಪ್ರದೇಶಗಳಲ್ಲಿ ಆರ್ಥಿಕ ಅಸ್ಥಿರತೆ ಹೆಚ್ಚಾಗುತ್ತಿದೆ. ಈ ನಡುವೆ, ಜಾಗತಿಕವಾಗಿ ಶೇ.50ಕ್ಕೂ ಹೆಚ್ಚು ಜನರು ತಮ್ಮ ಸರ್ಕಾರಗಳ ಮೇಲೆ ನಂಬಿಕೆ ಇಡಲು ಸಿದ್ಧರಿಲ್ಲ ಎಂಬುದು ವರದಿ ತಿಳಿಸಿದೆ.* 1995ರಿಂದ ಸಾಕ್ಷರತೆ, ಜೀವಿತಾವಧಿ ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಹೆಚ್ಚಿದರೂ, ಶ್ರೀಮಂತ ಮತ್ತು ಬಡ ರಾಷ್ಟ್ರಗಳ ನಡುವೆ ಇನ್ನೂ ವಿಸ್ತಾರವಾದ ಅಂತರವಿದೆ. ಜಾಗತಿಕವಾಗಿ ಶೇ.60ರಷ್ಟು ಉದ್ಯೋಗಿಗಳು ತಮ್ಮ ಉದ್ಯೋಗದ ಭದ್ರತೆಯ ಕುರಿತು ಆತಂಕದಲ್ಲಿದ್ದಾರೆ.* ಇವೆಲ್ಲಾ ವಿಚಾರಗಳ ಪೋಷಕವಾಗಿ ವರದಿ ಕೆಲವು ಪ್ರಮುಖ ಸಲಹೆಗಳನ್ನು ಮುಂದಿಟ್ಟಿದೆ: ನ್ಯಾಯಯುತ ತೆರಿಗೆ ವ್ಯವಸ್ಥೆ, ಎಲ್ಲರಿಗೂ ಸಮಾನವಾದ ಸಾಮಾಜಿಕ ರಕ್ಷಣಾ ವ್ಯವಸ್ಥೆ, ಆಡಳಿತ ವ್ಯವಸ್ಥೆಗಳನ್ನು ಬಲಪಡಿಸುವುದು, ವಿಶ್ವಾಸವನ್ನು ಪುನರ್ ಸ್ಥಾಪಿಸುವ ಪ್ರಯತ್ನಗಳು ಮತ್ತು ಜಾಗತಿಕ ಸಹಕಾರವನ್ನು ಉತ್ತೇಜಿಸುದಾಗಿ ವಿಶ್ವ ಶೃಂಗಸಭೆ ನಡೆಸುವುದು. ಇದರೊಂದಿಗೆ, ಆರೋಗ್ಯ, ಶಿಕ್ಷಣ ಹಾಗೂ ಭದ್ರತಾ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಶಿಫಾರಸು ಮಾಡಲಾಗಿದೆ.