Job Description: * ಪ್ಯಾರಿಸ್ ಮೂಲದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (RSF) ಎಂಬ ಅಂತರರಾಷ್ಟ್ರೀಯ ಲಾಭರಹಿತ ಸಂಸ್ಥೆ ಇತ್ತೀಚಿಗೆ ಬಿಡುಗಡೆ ಮಾಡಿದ 2024ನೇ ಸಾಲಿನ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ (ವರ್ಲ್ಡ್ ಪ್ರೆಸ್ ಫ್ರೀಡಮ್ ಇಂಡೆಕ್ಸ್‌) ವರದಿಯ ಪ್ರಕಾರ ವಿಶ್ವದ 180 ದೇಶಗಳ ಪೈಕಿ ಭಾರತವು 159 ನೇ ಸ್ಥಾನ ಸ್ಥಾನದಲ್ಲಿದೆ. 2023ರ ಈ ಪಟ್ಟಿಯಲ್ಲಿ ಭಾರತ 161ನೇ ಸ್ಥಾನದಲ್ಲಿತ್ತು.* ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮಾಧ್ಯಮಗಳು ರಾಜಕೀಯ ನಾಯಕರ, ರಾಜಕೀಯ ಪಕ್ಷಗಳ ನಿಯಂತ್ರಣದಲ್ಲಿವೆ. ಪತ್ರಿಕಾ ಸ್ವಾತಂತ್ರ್ಯ ತೀವ್ರ ಬಿಕ್ಕಟ್ಟಿನಲ್ಲಿದೆ ಎಂದು ವರದಿ ಹೇಳಿದೆ.* ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಪಾಕಿಸ್ತಾನವು 152ನೇ ಸ್ಥಾನ ಪಡೆಯುವ ಮೂಲಕ ಭಾರತಕ್ಕಿಂತ ಉತ್ತಮಸ್ಥಾನವನ್ನು ಗಳಿಸಿದೆ, ಶ್ರೀಲಂಕಾ 150 ನೇ ಸ್ಥಾನದಲ್ಲಿದೆ. ಪಾಕಿಸ್ತಾನವು 2023 ರಲ್ಲಿ 150 ನೇ ಸ್ಥಾನ ಪಡೆದಿತ್ತು. * ಉತ್ತಮ ಪತ್ರಿಕಾ ಸ್ವಾತಂತ್ರ್ಯ ಹೊಂದಿರುವ ದೇಶವಾಗಿ ನಾರ್ವೆ ಮೊದಲ ಸ್ಥಾನ ಪಡೆದಿದೆ. ಡೆನ್ಮಾರ್ಕ್ ಹಾಗೂ ಸ್ವೀಡನ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ. ಪೂರ್ವ ಆಫ್ರಿಕಾದ ಎರಿಟ್ರಿಯಾ ದೇಶ 180ನೇ ಸ್ಥಾನ ಪಡೆಯುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಅತ್ಯಂತ ಕೆಟ್ಟ ವಾತಾವರಣ ಇರುವ ದೇಶ ಎಂಬ ಕುಖ್ಯಾತಿಗೆ ಗುರಿಯಾಗಿದೆ.* 145ರಿಂದ 180ರವರೆಗಿನ ಸ್ಥಾನಗಳನ್ನು ಪಡೆದ ದೇಶಗಳನ್ನು ಪತ್ರಿಕಾ ಸ್ವಾತಂತ್ರ್ಯಕ್ಕೆ 'ರೆಡ್ ಜೋನ್' (ಅಪಾಯದ ವಲಯ) ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆಯು ತಿಳಿಸಿದೆ. ವಿಶೇಷವೆಂದರೆ ಅತಿದೊಡ್ಡ ಆರ್ಥಿಕತೆ ಹೊಂದಿರುವ ನೆರೆಯ ರಾಷ್ಟ್ರ ಚೀನಾ ರೆಡ್ ಜೋನ್ ವ್ಯಾಪ್ತಿಯಲ್ಲಿದೆ. 1 ರಿಂದ 8 ನೇ ಸ್ಥಾನವನ್ನು ಪಡೆದ ದೇಶಗಳನ್ನು ಗ್ರೀನ್ ಜೋನ್ ಎಂದು ಗುರುತಿಸಲಾಗಿದೆ. * 1993ರಲ್ಲಿ ಮೊತ್ತಮೊದಲ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸುವುದಾಗಿ ಘೋಷಿಸಲಾಯಿತು. ಅಂದಿನಿಂದ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿರುವ ಮಾಧ್ಯಮಗಳ ಸ್ಥಿತಿಗತಿ, ಅವುಗಳಿಗಿರುವ ಸ್ವಾತಂತ್ರವನ್ನು ಅಳೆಯಲಾಗುತ್ತಿದೆ. ಆಯಾ ದೇಶದ ಸಂದರ್ಭ, ಸುರಕ್ಷತೆ, ಕಾನೂನು ಚೌಕಟ್ಟು, ಆರ್ಥಿಕ ಸನ್ನಿವೇಶ, ಸಾಮಾಜಿಕ ಸಾಂಸ್ಕೃತಿಕ ಸಂದರ್ಭ, ರಾಜಕೀಯವನ್ನು ಆಧಾರವಾಗಿಟ್ಟುಕೊಂಡು ಸೂಚ್ಯಂಕವನ್ನು ಅಳೆಯಲಾಗುತ್ತದೆ.* ಒಗ್ಗಟ್ಟು ಹಾಗೂ ಮನ್ನಣೆಯ ಸೂಚಕವಾಗಿ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆ ಗಾಜಾದ ಬಿಕ್ಕಟ್ಟನ್ನು ವರದಿ ಮಾಡುತ್ತಿರುವ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ 'ಯುನೆಸ್ಕೋ ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಮ್' ಪ್ರಶಸ್ತಿಯ ವಿಜೇತರು ಎಂದು ಹೆಸರಿಸಲಾಗಿದೆ.- ಪತ್ರಿಕಾ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡುವ ಟಾಪ್ 5 ರಾಷ್ಟ್ರಗಳು : 1 : ನಾರ್ವೆ2 : ಡೆನ್ಮಾರ್ಕ್3 : ಸ್ವೀಡನ್4 : ನೆದರ್ ಲೆಂಡ್5 : ಫಿನ್‌ಲೆಂಡ್- ಅಪಾಯದಲ್ಲಿರುವ ಟಾಪ್ 10 ರಾಷ್ಟ್ರಗಳು1 : ಮ್ಯಾನ್ಮಾರ್2 : ಚೀನಾ 3 : ಬಹರೇನ್4 : ವಿಯೆಟ್ನಾಂ5 : ತುರ್ಕ್‌ಮೆನಿಸ್ತಾನ6 : ಇರಾನ್7 : ಉತ್ತರ ಕೊರಿಯಾ8 : ಅಫಘಾನಿಸ್ತಾನ9 : ಸಿರಿಯಾ10 : ಎರಿಟ್ರಿಯಾ (ಪೂರ್ವ ಆಫ್ರಿಕಾ)