* ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (RSF) ತನ್ನ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ 21ನೇ ಆವೃತ್ತಿಯನ್ನು ಬುಧವಾರ (ಮೇ.3)  ಬಿಡುಗಡೆಗೊಳಿಸಿದ್ದು, ಪಟ್ಟಿಯಲ್ಲಿರುವ 180 ರಾಷ್ಟ್ರಗಳ ಪೈಕಿ ಭಾರತವು ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ 161ನೇ ಸ್ಥಾನ ಪಡೆದುಕೊಂಡಿದೆ. * 2022ರಲ್ಲಿ 150ನೇ ಸ್ಥಾನದಲ್ಲಿದ್ದ ಅದು 2023ರಲ್ಲಿ 11 ಸ್ಥಾನ ಕೆಳಕ್ಕೆ ಕುಸಿಯುವ ಮೂಲಕ ಇನ್ನಷ್ಟು ಕಳಪೆ ಸಾಧನೆಯನ್ನು ಪ್ರದರ್ಶಿಸಿದೆ. ಪತ್ರಕರ್ತರ ಪಾಲಿಗೆ ಅತ್ಯಂತ ಗಂಭೀರ ಸ್ಥಿತಿಯಿರುವ 31 ರಾಷ್ಟ್ರಗಳನ್ನು RSFಗುರುತಿಸಿದ್ದು, ಭಾರತವೂ ಈ ಗುಂಪಿನಲ್ಲಿ ಸೇರಿದೆ.