* ಪ್ರತಿ ವರ್ಷ ಅಕ್ಟೋಬರ್ 24ರಂದು ವಿಶ್ವ ಪೋಲಿಯೋ ದಿನ (World Polio Day) ಅನ್ನು ಆಚರಿಸಲಾಗುತ್ತದೆ. ಈ ದಿನವನ್ನು ಜಗತ್ತಿನಾದ್ಯಂತ ಪೋಲಿಯೋ ವೈರಸ್ ನಿರ್ಮೂಲನೆಗೆ ಕೈಗೊಂಡ ಹೋರಾಟ ಮತ್ತು ಅದರ ಯಶಸ್ಸುಗಳನ್ನು ನೆನಪಿಸಲು ಆಚರಿಸಲಾಗುತ್ತದೆ.* 📌 2025ರ ವಿಶ್ವ ಪೋಲಿಯೋ ದಿನದ ಥೀಮ್: Together, We End Polio”(ಒಟ್ಟಾಗಿ,ನಾವು ಪೋಲಿಯೋವನ್ನು ಅಂತ್ಯಗೊಳಿಸೋಣ)🔹 ಪೋಲಿಯೋ ವೈರಸ್‌ ವಿರೋಧಿ ಜಾಗತಿಕ ಅಭಿಯಾನವನ್ನು ಬಲಪಡಿಸಲು, ವಿಶ್ವ ಆರೋಗ್ಯ ಸಂಸ್ಥೆ (WHO), ರೋಟರಿ ಇಂಟರ್ನ್ಯಾಷನಲ್ ಮತ್ತು ಯುನಿಸೆಫ್ ಸೇರಿ ಹಲವಾರು ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ.🔹 1988ರಲ್ಲಿ ಪ್ರಾರಂಭವಾದ ಗ್ಲೋಬಲ್ ಪೋಲಿಯೋ ಎರಾಡಿಕೇಶನ್ ಇನಿಶಿಯೇಟಿವ್ (GPEI) ಮುಖಾಂತರ ವಿಶ್ವದ ಬಹುತೇಕ ರಾಷ್ಟ್ರಗಳು ಪೋಲಿಯೋಮುಕ್ತವಾಗಿವೆ.🌍 ಭಾರತವು 2014ರಲ್ಲಿ ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಲ್ಪಟ್ಟಿತ್ತು — ಇದು ಆರೋಗ್ಯ ಕ್ಷೇತ್ರದ ಮಹತ್ವದ ಮೈಲಿಗಲ್ಲಾಗಿದೆ.ಆದರೆ, ನೆರೆ ರಾಷ್ಟ್ರಗಳಲ್ಲಿ ಪೋಲಿಯೋ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿರಂತರ ಎಚ್ಚರಿಕೆ ಮತ್ತು ಲಸಿಕಾಕರಣ ಅತ್ಯವಶ್ಯಕವಾಗಿದೆ.💉 ಆರೋಗ್ಯ ಇಲಾಖೆ, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳು ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕುರಿತು ಜಾಗೃತಿ ಅಭಿಯಾನಗಳು ಕೈಗೊಂಡಿವೆ.ಈ ಪ್ರಯತ್ನದ ಉದ್ದೇಶ — ಯಾವುದೇ ಮಗು ಪೋಲಿಯೋ ಬಾಧಿತವಾಗದ ಭವಿಷ್ಯ ನಿರ್ಮಿಸುವುದು.