* ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ಸನ್ರನ್ನು ಸೋಲಿಸಿದ ಭಾರತದ ಚೆಸ್ ಪಟು ಡಿ.ಗುಕೇಶ್ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.* ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, 'ಗುಕೇಶ್ ಅಸಾಧಾರಣ ಸಾಧನೆ ಮಾಡಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡಿದ ಅವರಿಗೆ ಅಭಿನಂದನೆಗಳು.* 2025ರ ನಾರ್ವೆ ಚೆಸ್ನ 6ನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ರನ್ನು ಸೋಲಿಸಿ, ಅವರ ವಿರುದ್ಧ ಮೊದಲ ಗೆಲುವು ದಾಖಲಿಸಿದ್ದಾರೆ.* ಇದು ಅವರ ಪ್ರತಿಭೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತದೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ' ಎಂದಿದ್ದಾರೆ.* ವಿಶ್ವನಂ.1 ಚೆಸ್ ಪಟು ಮಾಗ್ನಸ್ ಕಾರ್ಲ್ಸನ್ ವಿರುದ್ಧ ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಸೇಡು ತೀರಿಸಿಕೊಂಡಿದ್ದಾರೆ.* ಭಾನುವಾರ ರಾತ್ರಿ ನಡೆದ ನಾರ್ವೆ ಚೆಸ್ ಟೂರ್ನಿಯ 6ನೇ ಸುತ್ತಿನ ಮುಖಾಮುಖಿಯಲ್ಲಿ ಗುಕೇಶ್ ಗೆಲುವು ಸಾಧಿಸಿದರು. ಕ್ಲಾಸಿಕಲ್ ಚೆಸ್ನಲ್ಲಿ ಗುಕೇಶ್ಗೆ ಇದು ಕಾರ್ಲ್ ಸನ್ ವಿರುದ್ಧ ಮೊದಲ ಗೆಲುವು.* 4 ಗಂಟೆಗಳ ಕಾಲ ನಡೆದ ಪಂದ್ಯದ ಬಹುತೇಕ ಸಮಯ ನಾರ್ವೆಯ ಕಾರ್ಲ್ನ್ ಮುನ್ನಡೆಯಲ್ಲಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಮಾಡಿದ ಎಡವಟ್ಟು ಕಾರ್ಲ್ಸನ್ನ್ನು ಸೋಲಿಸಿತು.* ಸದ್ಯ ಗುಕೇಶ್ 8.5 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದ್ದಾರೆ. ಕಾರ್ಲ್ಸನ್ ಹಾಗೂ ಫ್ಯಾಬಿಯಾನೊ ಕರುನಾ ತಲಾ 9.5 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.* ಮತ್ತೊಂದೆಡೆ ಹಿಕರು ನಕಮುರಾ ವಿರುದ್ಧ ಟೈ ಸಾಧಿಸಿದ ಅರ್ಜುನ್ ಎರಿಗೈಸಿ, 7.5 ಅಂಕದೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.ವೈಶಾಲಿಗೆ ಜಯ: ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ ಭಾರತದವರೇ ಆದ ಆರ್. ವೈಶಾಲಿ ವಿರುದ್ಧ ಸೋಲನುಭವಿಸಿತು. ಸದ್ಯ ಕೊನೆರು 9.5 ಅಂಕದೊಂದಿಗೆ 2ನೇ ಸ್ಥಾನ, ವೈಶಾಲಿ(8 ಅಂಕ) 4ನೇ ಸ್ಥಾನದಲ್ಲಿದ್ದಾರೆ.