* ನದಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅವುಗಳ ಸಂರಕ್ಷಣೆಯನ್ನು ಉತ್ತೇಜಿಸಲು ಪ್ರತಿ ವರ್ಷ ಸೆಪ್ಟೆಂಬರ್ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 22 ರಂದು ಈ ದಿನದ ಆಚರಣೆ ನಡೆಯುತ್ತಿದೆ.* ಜಲಮಾಲಿನ್ಯವು ಜಗತ್ತಿನ ಅತಿದೊಡ್ಡ ಸಮಸ್ಯೆ, ನದಿಗಳ ಮಾಲಿನ್ಯವನ್ನು ತಡೆಯುವುದು ಅತ್ಯಂತ ಪ್ರಮುಖ ಸಂಗತಿಯಾಗಿದೆ. 2005ರಲ್ಲಿ ಪ್ರಸಿದ್ಧ ಪರಿಸರವಾದಿ ಮಾರ್ಕ್ ಏಂಜೆಲೋ ಅವರು ಜಲಜೀವ ಅಭಿಯಾನದ (ವಾಟರ್ ಫಾರ್ ಲೈಫ್) ಸಂದರ್ಭದಲ್ಲಿ ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿದರು. * ಈ ಅಭಿಯಾನದಲ್ಲಿ ಅವರು ವಿಶ್ವ ನದಿ ದಿನವನ್ನು ಆಚರಿಸುವ ಅಂಶವನ್ನು ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ಜೀವಸಂಕುಲದ ಉಳಿವಿಗೆ ನದಿಗಳು ಎಷ್ಟು ಮುಖ್ಯ ಎಂಬುದನ್ನು ತಿಳಿಸಲು ವಿಶ್ವಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ ದಿನ ಆಚರಿಸಲು ಕರೆ ನೀಡಿತು. 2005ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. * ನದಿಗಳ ಸ್ವಚ್ಛತೆ ಮತ್ತು ಅವುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಲು ಮತ್ತು ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.- ಪ್ರಪಂಚದ ಒಟ್ಟು ನದಿಗಳ ಸಂಖ್ಯೆ : 1,65,000- ಪ್ರಪಂಚದ ಅತಿ ಉದ್ದನದಿ: ನೈಲ್, 6650 ಕಿ.ಮೀ- ಪ್ರಪಂಚದ ಅತಿ ದೊಡ್ಡ ನದಿ: ಅಮೆಜಾನ್, 6400 ಕಿ.ಮೀ- ಭಾರತದಲ್ಲಿರುವ ಒಟ್ಟು ನದಿಗಳ ಸಂಖ್ಯೆ : 400ಕ್ಕೂ ಅಧಿಕ - ಭಾರತದ ಅತಿದೊಡ್ಡ ನದಿ: ಸಿಂಧೂ ನದಿ, 3180 ಕಿ.ಮೀ- ಕರ್ನಾಟಕದ ಅತಿದೊಡ್ಡ ನದಿ: ಕಾವೇರಿ, 1465 ಕಿ.ಮೀ- ಕರ್ನಾಟಕದ ಅತಿ ಉದ್ದ ನದಿ: ಘಟಪ್ರಭಾ (ಪಶ್ಚಿಮ ಘಟ್ಟಗಳಲ್ಲಿ 884 ಕಿ.ಮೀ)
* ಭಾರತದ ಪ್ರಮುಖ ನದಿಗಳು ಮತ್ತು ಉಗಮ ಸ್ಥಾನ - ಗಂಗಾ - ಗಂಗೋತ್ರಿ (ಉತ್ತರಾಖಂಡ)- ಯಮುನಾ- ಯಮುನೋತ್ರಿ (ಉತ್ತರಾಖಂಡ)- ಸಿಂಧೂ- ಮಾನಸ ಸರೋವರ (ಟಿಬೆಟ್)- ನರ್ಮದಾ- ಮೈಕಾಲ್ ಹಿಲ್ಸ್ ಅಮರ್ಕಂಟಕ್ (ಮಧ್ಯಪ್ರದೇಶ)- ತಾಪ್ತಿ- ಸತ್ಪುರ ವಲಯ, ಬೇತುಲ್ (ಮಧ್ಯಪ್ರದೇಶ)- ಸಟ್ಲಜ್ - ಕೈಲಾಶ್ (ಟಿಬೆಟ್)- ಮಹಾನದಿ ನಾಗ್ರಿ ಟೌನ್ (ಛತ್ತೀಸ್ಗಢ)- ಗೋದಾವರಿ- ನಾಸಿಕ್ (ಮಹಾರಾಷ್ಟ್ರ)- ಕೃಷ್ಣ- ಮಹಾಬಲೇಶ್ವರ (ಮಹಾರಾಷ್ಟ್ರ)- ಕಾವೇರಿ- ಬ್ರಹ್ಮಗಿರಿ ಪರ್ವತ ಶ್ರೇಣಿ (ಕೊಡಗು)- ಪೆನ್ನಾರ್- ನಂದಿಬೆಟ್ಟ (ಚಿಕ್ಕಬಳ್ಳಾಪುರ)