* ರಾಜ್ಯ ಸರ್ಕಾರದ ಶಕ್ತಿ ಯೋಜನೆ ಇದೀಗ ಮತ್ತೊಂದು ಅಂತರರಾಷ್ಟ್ರೀಯ ಮಟ್ಟದ ಗೌರವವನ್ನು ಪಡೆದಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವ ಈ ಯೋಜನೆ International Book of Records – World Record of Excellenceನಲ್ಲಿ ಸ್ಥಾನ ಪಡೆದಿದೆ.* ಈಗಾಗಲೇ ಇದು Golden Book of World Recordsನಲ್ಲಿ ದಾಖಲಾಗಿತ್ತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇದನ್ನು ಹೆಮ್ಮೆಯ ಸಂಗತಿಯೆಂದು ತಿಳಿಸಿದ್ದಾರೆ.* ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾರ್ಮಿಕ ಮುಖಂಡರಿಗೆ ಅವರು ಧನ್ಯವಾದಗಳನ್ನು ಸಲ್ಲಿಸಿದರು.* ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಮತ್ತು ಕೈಗಾರಿಕಾ ದೃಷ್ಟಿಯಿಂದ ಸಬಲರನ್ನಾಗಿಸುವಲ್ಲಿ ಶಕ್ತಿ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ. ಇದನ್ನು ಅನೇಕ ರಾಜ್ಯಗಳು ಅನುಸರಿಸುತ್ತಿರುವುದು ಇದರ ಯಶಸ್ಸಿಗೆ ಸಾಕ್ಷಿ. ಮಹಿಳಾ ಪ್ರಯಾಣಿಕರಿಗೂ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.