* ಭಾರತದ ಗ್ರಾಂಡ್ ಮಾಸ್ಟರ್ ಗುಕೇಶ್ ವಿಶ್ವಚೆಸ್ ಚಾಂಪಿಯನ್ಷಿಪ್ನ 11ನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ಕಿರಿಯ ವಿಶ್ವ ಚಾಂಪಿಯನ್ ಹಾದಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.* ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಸವಾಲನ್ನು ಹಿಮ್ಮೆಟ್ಟಿಸುವ ಮೂಲಕ ಗುಕೇಶ್ 6-5 ಅಂಕಗಳಿಂದ ಮುನ್ನಡೆ ಸಾಧಿಸಿದರು.* 14 ಕ್ಲಾಸಿಕ್ ಪಂದ್ಯಗಳ ಈ ಹಣಾಹಣಿ 18 ವರ್ಷದ ಗುಕೇಶ್ ಮೊದಲ ಬಾರಿಗೆ ಮುನ್ನಡೆ ಸಾಧಿಸಿದ್ದಾರೆ. ಅಲ್ಲದೆ ರೋಚಕ ಕಾದಾಟ ಕೊನೇ ಹಂತ ತಲುಪುತ್ತಿರುವ ಸಮಯದಲ್ಲಿ ಗುಕೇಶ್ಗೆ ಇದು ಅಮೂಲ್ಯ ಮುನ್ನಡೆ ಎನಿಸಿದೆ.* ಚಾಂಪಿಯನ್ ಆಗಲು ಕೇವಲ 1.5 ಪಾಯಿಂಟ್ಸ್ ಗಳಿಂದ ದೂರವಿದ್ದಾರೆ. ಮೊದಲ 7.5 ಪಾಯಿಂಟ್ಸ್ ಗಳಿಸುವ ಮೂಲಕ ಆಟಗಾರ ವಿಶ್ವ ಚಾಂಪಿಯನ್ ಪಟ್ಟಕ್ಕೇರುತ್ತಾರೆ.* ಭಾನುವಾರ ನಡೆದ 11ನೇ ಪಂದ್ಯದಲ್ಲಿ ಬಿಳಿ ಕಾಯಿಯೊಂದಿಗೆ ಆಡಿದ ಗುಕೇಶ್ 29 ನಡೆಗಳಲ್ಲಿ ಗೆಲುವು ದಾಖಲಿಸಿದರು. ಇದರೊಂದಿಗೆ 5-5 ಸ್ಕೊರ್ಗಳಿಂದ ಸತತ 7 ಡ್ರಾ ಬಳಿಕ ಗುಕೇಶ್ ಜಯ ಕಂಡಂತಾಗಿದೆ. ಈ ಮುನ್ನ ಮೊದಲ ಪಂದ್ಯ ಸೋತಿದ್ದ ಗುಕೇಶ್, 3ನೇ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದರು.