* ಕೆನ್ಯದ ಫೇತ್ ಕಿಪ್ಯೆಗಾನ್ ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಮಹಿಳೆಯರ 1500 ಮೀ. ಓಟದಲ್ಲಿ ಅಭೂತಪೂರ್ವ ನಾಲ್ಕನೇ ಬಾರಿ ಚಿನ್ನ ಜಯಿಸಿದರು.* 3:52.15 ನಿಮಿಷಗಳಲ್ಲಿ ಗುರಿ ತಲುಪಿ ಮಧ್ಯಮ ದೂರದ ಶ್ರೇಷ್ಠ ಓಟಗಾರ್ತಿಯ ಸ್ಥಾನಮಾನ ಗಿಟ್ಟಿಸಿಕೊಂಡರು. ದೋರ್ಕಸ್ ಇವೊಯಿ (ಬೆಳ್ಳಿ – 3:54.02) ಮತ್ತು ಆಸ್ಟ್ರೇಲಿಯಾದ ಜೆಸಿಕಾ ಹಲ್ (ಕಂಚು – 3:55.16) ಇತರೆ ಪದಕ ವಿಜೇತರು.* ಅಮೆರಿಕದ ಕಾರ್ಡೆಲ್ ಟಿಂಚ್ 12.99 ಸೆಕೆಂಡುಗಳಲ್ಲಿ ಓಡುತ್ತ ಚಿನ್ನ ಪಡೆದರು. ಜಮೈಕಾದ ಒರ್ಲಾಂಡೊ ಬೆನೆಟ್ (13.08) ಬೆಳ್ಳಿ ಹಾಗೂ ಟೈಲರ್ ಮ್ಯಾಸನ್ (13.12) ಕಂಚು ಜಯಿಸಿದರು. ನಾಲ್ಕನೇ ಚಿನ್ನ ಗೆಲ್ಲುವ ಆಸೆ ಹೊಂದಿದ್ದ ಅಮೆರಿಕದ ಗ್ರಾಂಟ್ ಹೊಲೊವೇ ಸೆಮಿಫೈನಲ್ನಲ್ಲಿ ನಿರಾಶರಾದರು.* ಅಮೆರಿಕದ ಮೆಕ್ಲಾಗ್ಲಿನ್–ಲೆವ್ರೋನ್ 400 ಮೀ. ಓಟದ ಸೆಮಿಫೈನಲ್ನಲ್ಲಿ 48.29 ಸೆಕೆಂಡುಗಳಲ್ಲಿ ಗುರಿತಲುಪಿ ಹೊಸ ವಿಶ್ವದಾಖಲೆ ಬರೆದರು.* 2006ರ ಸಾನ್ಯಾ ರಿಚರ್ಡ್ಸ್–ರಾಸ್ ಅವರ 48.70 ಸೆಕೆಂಡು ದಾಖಲೆಯನ್ನು ಮುರಿದರು. ಫೈನಲ್ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಅಥ್ಲೀಟ್ ಎಂದೇ ಗುರುತಿಸಲ್ಪಟ್ಟಿದ್ದಾರೆ.