* ಟೋಕಿಯೊದಲ್ಲಿ ಸೆಪ್ಟೆಂಬರ್ 13ರಿಂದ 21ರವರೆಗೆ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ಗಾಗಿ 19 ಮಂದಿಯ ಭಾರತ ತಂಡವನ್ನು ಪ್ರಕಟಿಸಲಾಗಿದೆ.* ಜಾವೆಲಿನ್ ತಾರೆ ಹಾಗೂ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ತಂಡದ ನಾಯಕರಾಗಿದ್ದಾರೆ.* ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ವರು ಪುರುಷರು ಜಾವೆಲಿನ್ ಥ್ರೋದಲ್ಲಿ ಸ್ಪರ್ಧಿಸಲಿದ್ದಾರೆ.* ನೀರಜ್ ಚೋಪ್ರಾ, ಸಚಿನ್ ಯಾದವ್, ಯಶ್ವೀರ್ ಸಿಂಗ್ ಮತ್ತು ರೋಹಿತ್ ಯಾದವ್. ಗಾಯದಿಂದ ಹಿಂದೆಸರಿದಿದ್ದ ರೋಹಿತ್ ಈ ಬಾರಿ ಮರಳಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಕಾರಣ ನೀರಜ್ ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದಾರೆ.* ಪುರುಷರಲ್ಲಿ ಮುರಳಿ ಶ್ರೀಶಂಕರ್ (ಲಾಂಗ್ಜಂಪ್), ಗುಲ್ವೀರ್ ಸಿಂಗ್ (5000-10000 ಮೀ.), ಪ್ರವೀಣ್ ಚಿತ್ರವೇಲ್ ಮತ್ತು ಅಬ್ದುಲ್ಲಾ ಅಬೂಬಕ್ಕರ್ (ಟ್ರಿಪಲ್ ಜಂಪ್), ಸರ್ವೇಶ್ ಕುಶಾರೆ (ಹೈಜಂಪ್), ಅನಿಮೇಶ್ ಕುಜೂರ್ (200 ಮೀ.), ತೇಜಸ್ ಶಿರ್ಸೆ (110 ಮೀ. ಹರ್ಡಲ್ಸ್), ಸರ್ವಿನ್ ಸೆಬಾಸ್ಟಿಯನ್ (20 ಕಿ.ಮೀ. ರೇಸ್ ವಾಕ್), ರಾಮ್ ಬಾಬೂ ಮತ್ತು ಸಂದೀಪ್ ಕುಮಾರ್ (35 ಕಿ.ಮೀ. ರೇಸ್ ವಾಕ್) ಸೇರಿದ್ದಾರೆ.* ಮಹಿಳೆಯರಲ್ಲಿ ಪಾರುಲ್ ಚೌಧರಿ ಮತ್ತು ಅಂಕಿತಾ ಧ್ಯಾನಿ (3000 ಮೀ. ಸ್ಟೀಪಲ್ಚೇಸ್), ಅನ್ನು ರಾಣಿ (ಜಾವೆಲಿನ್), ಪ್ರಿಯಾಂಕಾ ಗೋಸ್ವಾಮಿ (35 ಕಿ.ಮೀ. ರೇಸ್ ವಾಕ್) ಮತ್ತು ಪೂಜಾ (800 ಮೀ. ಮತ್ತು 1500 ಮೀ.) ಸ್ಥಾನ ಪಡೆದಿದ್ದಾರೆ.* ಅರ್ಹತೆ ಪಡೆದಿದ್ದ ಆಕಾಶದೀಪ್ ಸಿಂಗ್, ನಂದಿನಿ ಅಗಸರ ಹಾಗೂ ಅವಿನಾಶ್ ಸಾಬ್ಳೆ ಗಾಯ ಮತ್ತು ಫಿಟ್ನೆಸ್ ಸಮಸ್ಯೆಯಿಂದ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹಿಂದಿನ ಬಾರಿಗೆ ಬುಡಾಪೆಸ್ಟ್ನಲ್ಲಿ 28 ಮಂದಿ ತಂಡ ಭಾಗವಹಿಸಿತ್ತು.