* ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10ಕೆ ಬೆಂಗಳೂರಿನ 17ನೇ ಆವೃತ್ತಿಯ ಅಂತಾರಾಷ್ಟ್ರೀಯ ಕೂಟದ ರಾಯಭಾರಿ ಆಗಿ ದಲೀಲಾ ಮುಹಮ್ಮದ್ ಆಯ್ಕೆಯಾಗಿದ್ದಾರೆ. ಅಮೆರಿಕದ ಓಟಗಾರ್ತಿ ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ (2016, 2020) ಮತ್ತು ಬೆಳ್ಳಿ ಪದಕ ವಿಜೇತೆಯಾಗಿದ್ದು, ಅನೇಕ ವಿಶ್ವ ಚಾಂಪಿಯನ್ ಷಿಪ್ ಪ್ರಶಸ್ತಿಗಳಿಗೆ ಕೊರಳೊಡ್ಡಿದ್ದಾರೆ. * ಅವರು 2019 ರ ಅಮೆರಿಕ ಹೊರಾಂಗಣ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ ಷಿಪ್ ನಲ್ಲಿ ಇತಿಹಾಸ ನಿರ್ಮಿಸಿದರು. 400 ಮೀಟರ್ ಹರ್ಡಲ್ಸ್ ವಿಶ್ವ ದಾಖಲೆಯನ್ನು 52.20 ಸೆಕೆಂಡುಗಳಲ್ಲಿ ಮುರಿದಿರುವ ಅವರು, 2003 ರಲ್ಲಿ ನಿರ್ಮಿಸಿದ್ದ ಯುಲಿಯಾ ಪೆಚೊಂಕಿನಾ ಅವರ ದಾಖಲೆಯನ್ನು ಮೀರಿಸಿದರು. ಆ ವರ್ಷದ ಕೊನೆಯಲ್ಲಿ ದೋಹಾದಲ್ಲಿ ನಡೆದ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಅವರು ಅದನ್ನು 52.16 ಸೆಕೆಂಡುಗಳಿಗೆ ಸುಧಾರಿಸಿಕೊಂಡರು.* 2016 ರ ರಿಯೋ ಒಲಿಂಪಿಕ್ಸ್ ನ 400 ಮೀಟರ್ ಹರ್ಡಲ್ಸ್ ನಲ್ಲಿ ಒಲಿಂಪಿಕ್ ಚಿನ್ನ ಮತ್ತು ಟೋಕಿಯೊ 2020 ರ ಕೂಟದ ಫೈನಲ್ ನಲ್ಲಿ 51.58 ಸೆಕೆಂಡುಗಳಲ್ಲಿ ಓಡುವ ಮೂಲಕ ಮುಹಮ್ಮದ್ ಅವರ ಗಮನಾರ್ಹ ಸಾಧನೆ ತೋರಿದರು.* ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದ ಮುಹಮ್ಮದ್ “ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10 ಕೆ ಬೆಂಗಳೂರಿನ 17 ನೇ ಆವೃತ್ತಿಯ ಅಂತಾರಾಷ್ಟ್ರೀಯ ಕೂಟದ ಅಂಬಾಸಿಡರ್ ಆಗಿರುವುದಕ್ಕೆ ನನಗೆ ಗೌರವವಿದೆ. ನಾನು ಚಿಕ್ಕ ವಯಸ್ಸಿನಲ್ಲಿ ಸ್ಥಳೀಯ ರನ್ನಿಂಗ್ ಕ್ಲಬ್ ಗೆ ಸೇರಿದಾಗ ನನ್ನ ಪ್ರಯಾಣ ಪ್ರಾರಂಭವಾಯಿತು ಮತ್ತು ಆ ಉತ್ಸಾಹವು ಅಥ್ಲೆಟಿಕ್ಸ್ ಗೆ ಜೀವನಪರ್ಯಂತ ಬದ್ಧತೆಯಾಗಿ ಬೆಳೆದಿದೆ. ಬೆಂಗಳೂರಿನ ಓಡುವ ಸಮುದಾಯದ ಶಕ್ತಿ ಮತ್ತು ಉತ್ಸಾಹವನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ,’’ ಎಂದರು.* ಮುಹಮ್ಮದ್ ಕ್ರೀಡೆಯಲ್ಲಿ ವೈವಿಧ್ಯತೆಯನ್ನು ಪ್ರತಿಪಾದಿಸುತ್ತಾರೆ ಮತ್ತು ಯುವ ಕ್ರೀಡಾಪಟುಗಳಿಗೆ ಸಕ್ರಿಯವಾಗಿ ಮಾರ್ಗದರ್ಶನ ನೀಡುತ್ತಾರೆ. * ಮುಹಮ್ಮದ್ ಅವರೊಂದಿಗೆ ಬೆಂಗಳೂರಿನ ರೋಮಾಂಚಕ ಓಟದ ಸಂಸ್ಕೃತಿಯನ್ನು ಆಚರಿಸಲು ಮತ್ತು ಟಿಸಿಎಸ್ ವರ್ಲ್ಡ್ 10 ಕೆ ನ ಮತ್ತೊಂದು ಸ್ಮರಣೀಯ ಆವೃತ್ತಿಯನ್ನು ರಚಿಸಲು ನಾವು ಎದುರು ನೋಡುತ್ತಿದ್ದೇವೆ ” ಎಂದು ಪ್ರೊಕ್ಯಾಮ್ ಇಂಟರ್ನ್ಯಾಷನಲ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಹೇಳಿದರು.* ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವರ್ಲ್ಡ್ 10ಕೆ ಬೆಂಗಳೂರಿನ 17ನೇ ಆವೃತ್ತಿಯು ಒಟ್ಟು 210,000 ಯುಎಸ್ ಡಾಲರ್ ಬಹುಮಾನ ನಿಧಿಯನ್ನು ನೀಡುತ್ತದೆ.