* ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿ ಮೊತ್ತವನ್ನು ದಾಖಲೆಯ 50 ಮಿಲಿಯ ಪೌಂಡ್ (ಸುಮಾರು 530 ಕೋಟಿ ರೂಪಾಯಿ)ಗೆ  ಜೂನ್ 14 ರಂದು ಏರಿಸಲಾಗಿದೆ. * ಈ ಪ್ರಶಸ್ತಿ ಮೊತ್ತವನ್ನು ಹೆಚ್ಚಿಸಲು ಸಂಘಟಕ ಸಂಸ್ಥೆ ಎಇಎಲ್‌ಟಿಸಿಯ ನಿರ್ಧಾರವು ಟೆನಿಸ್ ಜಗತ್ತಿನಲ್ಲಿ ವಿಂಬಲ್ಡನ್‌ ಮಹತ್ವವನ್ನು ಬಿಂಬಿಸುತ್ತದೆ.* ಪುರುಷ ಮತ್ತು ಮಹಿಳಾ ಸಿಂಗಲ್ಸ್ ಚಾಂಪಿಯನ್ ಗಳು ತಲಾ 2.7 ಮಿಲಿಯ ಪೌಂಡ್ (ಸುಮಾರು 28.50 ಕೋಟಿ ರೂಪಾಯಿ) ಮೊತ್ತವನ್ನು ಗಳಿಸಲಿದ್ದಾರೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.* ಮೊದಲ ಸುತ್ತಿನಲ್ಲಿ ಸೋತವರೂ 60,000 ಪೌಂಡ್ (63.50 ಲಕ್ಷ ರೂಪಾಯಿ) ಪಡೆಯಲಿದ್ದಾರೆ. ಇದು ಭಾಗವಹಿಸುವ ಎಲ್ಲಾ ಆಟಗಾರರ ಬಗ್ಗೆ ಸಂಘಟಕರು ಹೊಂದಿರುವ ಸಮಾನತೆಯ ಮನೋಭಾವವನ್ನು ತೋರಿಸುತ್ತದೆ ಎಂದು ಅಭಿಪ್ರಾಯ ಪಡೆಯಲಾಗಿದೆ.