* ಈ ವರ್ಷದ ವಿಂಬಲ್ಡನ್ ಟೆನಿಸ್ ಚಾಂಪಿಯನ್ಷಿಪ್ಸ್ನಲ್ಲಿ ಬಹುಮಾನ ಹಣದ ಮೊತ್ತವನ್ನು ದಾಖಲೆಯ ₹622 ಕೋಟಿಗೆ (53.5 ಮಿಲಿಯನ್ ಪೌಂಡ್) ಹೆಚ್ಚಿಸಲಾಗಿದೆ ಎಂದು ಅಲ್ ಇಂಗ್ಲೆಂಡ್ ಕ್ಲಬ್ ಗುರುವಾರ ಪ್ರಕಟಿಸಿದೆ. ಸಿಂಗಲ್ಸ್ ವಿಭಾಗದ ವಿಜೇತರಿಗೆ ಸುಮಾರು ₹35 ಕೋಟಿ ಬಹುಮಾನ ಲಭಿಸುವುದಾಗಿದೆ.* ಒಟ್ಟು ಬಹುಮಾನ ಮೊತ್ತ ಕಳೆದ ವರ್ಷಕ್ಕಿಂತ ₹41 ಕೋಟಿಯಷ್ಟು ಹೆಚ್ಚಾಗಿದೆ. ಈ ವರ್ಷ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಹೆಚ್ಚು ಹಣ ನೀಡಲಾಗುತ್ತಿದ್ದು, ಮೊದಲ ಸುತ್ತಿನಲ್ಲಿ ಸೋಲುವ ಆಟಗಾರರೂ ಸಹ ₹76.80 ಲಕ್ಷ (66,000 ಪೌಂಡ್) ಪಡೆಯಲಿದ್ದಾರೆ. ಇದು ಶೇ.10ರಷ್ಟು ಹೆಚ್ಚಳವಾಗಿದೆ.* ಟೂರ್ನಿಯು ಜೂನ್ 30ರಂದು ಆರಂಭಗೊಂಡು ಜುಲೈ 13ರವರೆಗೆ ನಡೆಯಲಿದೆ. ಗ್ರಾಸ್ಕೋರ್ಟ್ನಲ್ಲಿ ನಡೆಯುವ ಈ ಪ್ರಸಿದ್ಧ ಗ್ರ್ಯಾಂಡ್ಸ್ಲಾಮ್ನಲ್ಲಿ ಈ ವರ್ಷದಿಂದ ಲೈನ್ ಜಜ್ಗಳ ಬದಲು ಎಲೆಕ್ಟ್ರಾನಿಕ್ ಲೈನ್ ಕಾಲಿಂಗ್ ವ್ಯವಸ್ಥೆ ಮೊದಲ ಬಾರಿ ಜಾರಿಗೆ ಬರಲಿದೆ.