Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಿಳಾಸ ವ್ಯವಸ್ಥೆಯಲ್ಲಿ ಹೊಸ ಯುಗ: ಯುಪಿಐ ಮಾದರಿಯ ಡಿಜಿಟಲ್ ಅಡ್ರೆಸ್
13 ಡಿಸೆಂಬರ್ 2025
* ಭಾರತದಲ್ಲಿ ಡಿಜಿಟಲ್ ಪಾವತಿಗಳಲ್ಲಿ ಯುಪಿಐ ಕ್ರಾಂತಿ ತಂದಂತೆ, ಈಗ
ವಿಳಾಸ ವ್ಯವಸ್ಥೆಯಲ್ಲೂ ಯುಪಿಐ ಮಾದರಿಯ ಡಿಜಿಟಲ್ ವ್ಯವಸ್ಥೆಯನ್ನು
ಪರಿಚಯಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ
‘ಧ್ರುವ ಡಿಜಿಟಲ್ ಅಡ್ರೆಸ್’ (
DHRUVA – Digital Hub for Reference and Unique Virtual Address
)
ಎಂಬ ಹೊಸ ಪರಿಕಲ್ಪನೆಯನ್ನು ಅಳವಡಿಸಲಾಗುತ್ತಿದೆ. ಇದರಿಂದ ದೇಶದ ಪ್ರತಿಯೊಬ್ಬ ನಾಗರಿಕರು, ಮನೆಗಳು ಮತ್ತು ಸಂಸ್ಥೆಗಳು ಸರಳ, ಏಕೀಕೃತ ಹಾಗೂ ನಿಖರ ಡಿಜಿಟಲ್ ವಿಳಾಸವನ್ನು ಹೊಂದುವಂತಾಗುತ್ತದೆ.
* ಈ ವ್ಯವಸ್ಥೆಯಲ್ಲಿ, ದೀರ್ಘ ಹಾಗೂ ಗೊಂದಲಕಾರಿ ವಿಳಾಸಗಳ ಬದಲು, ಯುಪಿಐ ಐಡಿ ತರಹದ
ಸಂಕ್ಷಿಪ್ತ, ಯುನಿಕ್ ಡಿಜಿಟಲ್ ವಿಳಾಸ
ವನ್ನು ನೀಡಲಾಗುತ್ತದೆ. ಈ ವಿಳಾಸವನ್ನು ಅಂಚೆ ವಿತರಣೆ, ಸರ್ಕಾರಿ ಸೇವೆಗಳು, ಇ-ಕಾಮರ್ಸ್ ವಿತರಣಾ ವ್ಯವಸ್ಥೆಗಳು, ತುರ್ತು ಸೇವೆಗಳು ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ.
*
ಧ್ರುವ (DHRUVA)
ಎಂದರೆ ಭೌತಿಕ ವಿಳಾಸದ ಗೊಂದಲವನ್ನು ನಿವಾರಿಸಿ, ಪ್ರತಿಯೊಂದು ಸ್ಥಳಕ್ಕೂ ಯುನಿಕ್ ವರ್ಚುವಲ್ ಅಡ್ರೆಸ್ ನೀಡುವ ಮೂಲಕ ವಿಳಾಸ ಹಂಚಿಕೆಯನ್ನು ಸುಲಭ, ನಿಖರ ಮತ್ತು ವೇಗವಾಗಿಸುವ ಡಿಜಿಟಲ್ ವ್ಯವಸ್ಥೆ.
* ಡಿಜಿಪಿನ್ (DIGIPIN) – ಪ್ರಮುಖ ಅಂಶಗಳು :
- ದೇಶದ ಪ್ರತಿಯೊಂದು 12 ಚದರ ಮೀಟರ್ ಪ್ರದೇಶಕ್ಕೆ ಒಂದು ಡಿಜಿಪಿನ್
- 10 ಅಕ್ಷರಗಳ ಆಲ್ಫಾ-ನ್ಯುಮೆರಿಕ್ ಕೋಡ್
- ಓಪನ್ ಸೋರ್ಸ್ ಲೊಕೇಶನ್ ಪಿನ್ ಸಿಸ್ಟಂ
- ಗೂಗಲ್ ಮ್ಯಾಪ್ ಲೊಕೇಶನ್ ಶೇರ್ ಮಾಡುವ ತಂತ್ರಜ್ಞಾನಕ್ಕೆ ಸಮಾನ
- ಡಿಜಿಪಿನ್ ನೀಡಿದರೆ ಸ್ಥಳದ ನಿಖರ ನಕ್ಷೆ ತಕ್ಷಣ ಲಭ್ಯವಾಗುವುದು.
*
ಧ್ರುವದಲ್ಲಿನ ಲೇಬಲ್ / ಪ್ರಾಕ್ಸಿ ಅಡ್ರೆಸ್ ವ್ಯವಸ್ಥೆ
ಯುಪಿಐ ಮಾದರಿಯಲ್ಲಿ ಕಾರ್ಯನಿರ್ವಹಿಸಿ, ವ್ಯಕ್ತಿಯ ಹೆಸರಿನಲ್ಲಿ ರಚಿಸಿದ ಡಿಜಿಟಲ್ ಲೇಬಲ್ಗೆ ಡಿಜಿಪಿನ್ ಹಾಗೂ ಭೌತಿಕ ವಿಳಾಸವನ್ನು ಲಿಂಕ್ ಮಾಡುವ ಮೂಲಕ, ವಿಳಾಸ ನೀಡಲು ಕೇವಲ ಆ ಲೇಬಲ್ ಸಾಕಾಗುವಂತೆ ಮಾಡುತ್ತದೆ.
* ಧ್ರುವದಿಂದ ಆಗುವ ಪ್ರಯೋಜನಗಳು:-
- ಡೆಲಿವರಿ ಸೇವೆಗಳು ಹೆಚ್ಚು ವೇಗ ಮತ್ತು ನಿಖರ
- ಕ್ಯಾಬ್ ಚಾಲಕರಿಗೆ ಸ್ಥಳ ಹುಡುಕುವುದು ಸುಲಭ
- ಅಂಚೆ ಸೇವೆಗಳಲ್ಲಿ ವಿಳಾಸ ಗೊಂದಲ ನಿವಾರಣೆ
- ಅನೌಪಚಾರಿಕ ಅಥವಾ ಸ್ಪಷ್ಟ ವಿಳಾಸ ಇಲ್ಲದ ಪ್ರದೇಶಗಳಿಗೂ ಪರಿಹಾರ
- ತುರ್ತು ಸೇವೆಗಳಿಗೆ ನಿಖರ ಲೊಕೇಶನ್ ಲಭ್ಯ
* ಧ್ರುವ ಮಹತ್ವದ ಯೋಜನೆಯಾಗಿರುವುದಕ್ಕೆ ಕಾರಣ, ಇದು ಭೌತಿಕ ವಿಳಾಸದ ಅವಲಂಬನೆಯನ್ನು ಕಡಿಮೆ ಮಾಡಿ ವಿಳಾಸದ ತಪ್ಪು ಮತ್ತು ವಿಳಂಬಗಳಿಗೆ ಅಂತ್ಯ ತರಲು ಸಹಾಯ ಮಾಡುವುದರೊಂದಿಗೆ ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಬಲ ನೀಡಿ ಸ್ಮಾರ್ಟ್ ಗವರ್ನನ್ಸ್ ಹಾಗೂ ಲಾಜಿಸ್ಟಿಕ್ಸ್ಗೆ ಉತ್ತೇಜನ ನೀಡುತ್ತದೆ.
* ಸಂಕ್ಷಿಪ್ತವಾಗಿ ಹೇಳುವುದಾದರೆ,
ಧ್ರುವ (DHRUVA)
ಭಾರತದ ವಿಳಾಸ ವ್ಯವಸ್ಥೆಯನ್ನು ಡಿಜಿಟಲ್ ಯುಗಕ್ಕೆ ತರುವ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಮೇನ್ ರೋಡ್ ಅಥವಾ ಲ್ಯಾಂಡ್ಮಾರ್ಕ್ ಇಲ್ಲದೆ ಕೇವಲ ಒಂದು ಡಿಜಿಟಲ್ ಅಡ್ರೆಸ್ ಸಾಕು.
ಧ್ರುವ ಒಂದು ಭಾರತದ ಹೊಸ ಡಿಜಿಟಲ್
ದಿಕ್ಕಾಗಲಿದೆ .
Take Quiz
Loading...