* ಭಾರತದ ವಿಳಾಸ ವ್ಯವಸ್ಥೆಯ ಆಧುನೀಕರಣದ ಭಾಗವಾಗಿ, ಕೇಂದ್ರ ಸರ್ಕಾರ 'ನಿಮ್ಮ ಡಿಜಿಪಿನ್ ತಿಳಿಯಿರಿ' ಮತ್ತು 'ನಿಮ್ಮ ಪಿನ್ ಕೋಡ್ ತಿಳಿಯಿರಿ' ಎಂಬ ಎರಡು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಬಿಡುಗಡೆ ಮಾಡಿದೆ.* ಈ ಉಪಕ್ರಮಗಳು ಸ್ಥಳಾಧಾರಿತ ಸೇವೆಗಳ ಸುಧಾರಣೆಗೆ ನಾಂದಿಯಾಗಿ ಕಾರ್ಯನಿರ್ವಹಿಸುತ್ತವೆ.* ಡಿಜಿಪಿನ್ (Digital PIN) ಒಂದು ಜಿಯೋ-ಕೋಡೆಡ್, ಗ್ರಿಡ್ ಆಧಾರಿತ ಡಿಜಿಟಲ್ ವಿಳಾಸ ವ್ಯವಸ್ಥೆಯಾಗಿದ್ದು, ಇದನ್ನು ಅಂಚೆ ಇಲಾಖೆ, ಐಐಟಿ ಹೈದರಾಬಾದ್ ಮತ್ತು ಇಸ್ರೋ ಸಂಯುಕ್ತವಾಗಿ ಅಭಿವೃದ್ಧಿಪಡಿಸಿದ್ದಾರೆ.* ಇದರ ಮೂಲಕ ವಿಳಾಸ ನಿರ್ವಹಣೆಯ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡಲಾಗುತ್ತದೆ.* 'ನಿಮ್ಮ ಡಿಜಿಪಿನ್ ತಿಳಿಯಿರಿ' ಪೋರ್ಟಲ್ ಬಳಕೆದಾರರಿಗೆ ನಿಖರವಾದ ಜಿಯೋಲೊಕೇಷನ್ ಆಧಾರಿತ ಡಿಜಿಪಿನ್ ಪಡೆಯಲು ಅವಕಾಶ ನೀಡುತ್ತದೆ.* ಇದು ಲಾಜಿಸ್ಟಿಕ್ಸ್, ತುರ್ತು ಸೇವೆ ಹಾಗೂ ಕೊನೆಯ ಹಂತದ ವಿತರಣೆಯನ್ನು ಸುಲಭಗೊಳಿಸುತ್ತದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸುಲಭಗೊಳಿಸುತ್ತದೆ.* 'ನಿಮ್ಮ ಪಿನ್ ಕೋಡ್ ತಿಳಿಯಿರಿ' ಪೋರ್ಟಲ್ GNSS ಆಧಾರಿತ ತಂತ್ರಜ್ಞಾನವನ್ನು ಬಳಸಿ, ಬಳಕೆದಾರರು ತಮ್ಮ ಸ್ಥಳದ ಪಿನ್ ಕೋಡ್ ಅನ್ನು ಹುಡುಕಲು ಸಹಾಯ ಮಾಡುತ್ತದೆ. ಜೊತೆಗೆ ಪಿನ್ ಕೋಡ್ ನಿಖರತೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಅವಕಾಶವಿದೆ.* ಜಿಯೋ-ರೆಫರೆನ್ಸ್ ಮಾಡಿದ ಪಿನ್ ಕೋಡ್ ಗಡಿಗಳ ಡೇಟಾ ಆಲ್ ಇಂಡಿಯಾ ಪಿನ್ ಕೋಡ್ ಬೌಂಡರಿ ಜಿಯೋ-ಜೆಸನ್ ಎಂಬ ಶೀರ್ಷಿಕೆಯಡಿಯಲ್ಲಿ ಸಾರ್ವಜನಿಕವಾಗಿ ಲಭ್ಯವಿದೆ.* ಈ ಮೂಲಕ ಅಂಚೆ ಇಲಾಖೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಪ್ರಮುಖ ಭಾಗವಾಗಿ ತನ್ನ ಪಾತ್ರವನ್ನು ವಿಸ್ತರಿಸುತ್ತಿದೆ.