* ಹರಿಯಾಣ ಮತ್ತು ರಾಜಸ್ತಾನ್ ತಂಡಗಳು ಡಿಸೆಂಬರ್ 16 ರಂದು ನಡೆಯಲಿರುವ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಹಣಾಹಣಿ ನಡೆಸಲಿವೆ.* ಡಿಸೆಂಬರ್ 14ರಂದು ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ 2023ರ ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್‌ನಲ್ಲಿ ರಾಜಸ್ತಾನ ಮತ್ತು ಕರ್ನಾಟಕ ತಂಡಗಳ ನಡುವಿನ ರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ರಾಜಸ್ಥಾನ ತಂಡವು 6 ವಿಕೆಟ್‌ಗಳಿಂದ ಗೆದ್ದು ಫೈನಲ್‌ ಪ್ರವೇಶಿಸಿದೆ.* ಅಶೋಕ್ ಮನೇರಿಯಾ ನಾಯಕತ್ವದ ಹರಿಯಾಣ ಕ್ರಿಕೆಟ್ ತಂಡವು ಸೆಮಿಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಹಿಮಾಂಶು ರಾಣಾ ಅವರು ಭರ್ಜರಿ ಶತಕ ಹೊಡೆದಿದ್ದರು.* ತಂಡದ ಬೌಲಿಂಗ್ ವಿಭಾಗದಲ್ಲಿ ಅನ್ಸುಲ್ ಕಾಂಬೋಜ್, ರಾಹುಲ್ ತೆವಾಟಿಯಾ, ಹರ್ಷಲ್ ಪಟೇಲ್ ಮತ್ತು ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಇದ್ದಾರೆ.