* ಭಾರತದ ಯುಪಿಐ (UPI) ಇದೀಗ ವಿಶ್ವದ ಅತಿದೊಡ್ಡ ನೈಜ-ಸಮಯದ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ವಿಶ್ವದಾದ್ಯಾಂತ ವಹಿವಾಟಿನಲ್ಲಿ ವೀಸಾ ಅನ್ನು ಹಿಂದಿಕ್ಕಿದೆ. * ಮೇ-ಜೂನ್ 2025ರ ಅವಧಿಯಲ್ಲಿ ಯುಪಿಐ ಪ್ರತಿದಿನ ಸರಾಸರಿ 65 ಕೋಟಿ ವಹಿವಾಟುಗಳನ್ನು ನಡೆಸಿದೆ.* ವೀಸಾ 200 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಯುಪಿಐ ಕೇವಲ 7 ದೇಶಗಳಲ್ಲಿ ಸಕ್ರಿಯವಾಗಿದ್ದು ಈ ಸಾಧನೆಯು ವಿಶೇಷವಾಗಿದೆ. ಈ ಕುರಿತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಟ್ವೀಟ್ ಮಾಡಿದ್ದಾರೆ.* ಭಾರತದಲ್ಲಿ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ, ಅಮೇಜಾನ್ ಪೇ, ವಾಟ್ಸಾಪ್ ಪೇ ಮುಂತಾದ ಆ್ಯಪ್ ಗಳ ಮೂಲಕ ಯುಪಿಐ ಸೇವೆ ಲಭ್ಯವಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಜನರು ಇದರ ಬಳಕೆಯಲ್ಲಿ ಮುಂದಿದ್ದಾರೆ.* ಆಗಸ್ಟ್ 1, 2025ರಿಂದ ಯುಪಿಐ ನಿಯಮಗಳಲ್ಲಿ ಬದಲಾವಣೆ ಜಾರಿಯಲ್ಲಿವೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ನಿಯಮಗಳನ್ನು ಪ್ರಕಟಿಸಿದ್ದು, ತಾಂತ್ರಿಕ ಸುಧಾರಣೆಗೆ ಉದ್ದೇಶಿಸಲಾಗಿದೆ. ಇದರಿಂದ ಬ್ಯಾಲೆನ್ಸ್ ಚೆಕ್ ಮತ್ತು ಆಟೋಪೇ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.