* ವೀರಗಾಥಾ 4.0 ಎಂಬ ರಾಷ್ಟ್ರ ಮಟ್ಟದ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ಕನ್ನಡದ 8 ಮಕ್ಕಳು ವಿಜೇತರಾಗಿ ಉನ್ನತ ಸ್ಥಾನ ಗಳಿಸಿದ್ದು, ಗಣರಾಜ್ಯೋತ್ಸವ 2025 ಸಂದರ್ಭದಲ್ಲಿ ಈ ವಿಜೇತ ವಿದ್ಯಾರ್ಥಿಗಳಿಗೆ ದೆಹಲಿಯ ಪ್ರತಿಷ್ಠಿತ ಗಣರಾಜ್ಯೋತ್ಸವ ಸಮಾರಂಭವನ್ನು ವೀಕ್ಷಿಸಲು ವಿಶೇಷ ಆಹ್ವಾನ ನೀಡಲಾಗಿದೆ.* ವೀರಗಾಥಾ ಪ್ರೋಜೆಕ್ಟ್ ಭಾರತೀಯ ಸೇನೆಯ ಶೌರ್ಯಕಥೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ "ಗಲ್ಲೆಂಟರಿ ಅವಾರ್ಡ್ಸ್" ಎಂಬ ಆಶಯದೊಂದಿಗೆ ರಚನೆಯಾದ ಸ್ಪರ್ಧೆಯಾಗಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿನ ಶ್ರದ್ಧೆ, ಸೃಜನಶೀಲತೆ, ಮತ್ತು ದೇಶಪ್ರೇಮವನ್ನು ಉತ್ತೇಜಿಸುತ್ತದೆ.* ನಾಲ್ಕು ವಿಭಾಗಗಳಲ್ಲಿ 25 ಮಂದಿ ವಿದ್ಯಾರ್ಥಿಗಳಂತೆ ಒಟ್ಟು 100 ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 3ರಿಂದ 5ನೆ ತರಗತಿ, 6 ರಿಂದ 8ನೇ ತರಗತಿ, 9 ರಿಂದ 10ನೇ ತರಗತಿ ಹಾಗೂ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕನ್ನಡದ 8 ಮಕ್ಕಳು ಪ್ರಶಸ್ತಿ ಜಯಿಸಿರುವುದು ಹೆಮ್ಮೆ ಸಂಗತಿಯಾಗಿದೆ. ದೇಶಾದ್ಯಂತ ಸುಮಾರು 2.31 ಲಕ್ಷ ಶಾಲೆಗಳಿಂದ ಬರೊಬ್ಬರಿ 1.76 ಕೋಟಿ ವಿದ್ಯಾರ್ಥಿಗಳು ಈ ವೀರಗಾಥಾ 4.0 ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. * ವೀರಗಾಥಾ 4.0 ಪ್ರಶಸ್ತಿ ಗೆದ್ದ ಕನ್ನಡಿಗರ ಪಟ್ಟಿ : 6 ರಿಂದ 8 ನೇ ತರಗತಿ:- ವಿನೀಶ್ ಅಚಾರ್ಯ (ಚಿತ್ರಕಲೆ / ರೇಖಾಚಿತ್ರ), ಎಸ್ಆರ್ ಪಬ್ಲಿಕ್ ಸ್ಕೂಲ್, ಹೆಬ್ರಿ, ಉಡುಪಿ9 ರಿಂದ 10 ನೇ ತರಗತಿ:- ಸೃಷ್ಟಿ ಎಸ್ ವಡ್ಡರ್ (ಚಿತ್ರಕಲೆ / ರೇಖಾಚಿತ್ರ), ಎನ್ಎಲ್ಇ ಸೊಸೈಟಿ ಡಾ.ವಿ.ಜಿ. ಜೋಶಿ ರೋಟರಿ ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್, ಹುಬ್ಬಳ್ಳಿ- ಸಾತ್ವಿಕ ಭಟ್ (ಚಿತ್ರಕಲೆ / ರೇಖಾಚಿತ್ರ), ಶ್ರೀ ಧರ್ಮಸ್ಥಳ ಎಂ ಇಂಗ್ಲಿಷ್ ಮಾಧ್ಯಮ ಹೈಸ್ಕೂಲ್, ಉಜಿರೆ, ದ.ಕನ್ನಡ- ಸ್ನಿಗ್ಧಾ (ಕವನ), ಶ್ರೀ ಭುವನೇಂದ್ರ ವಸತಿ ಶಾಲೆ, ಕಾರ್ಕಳ, ಉಡುಪಿ- ಸಾಕ್ಷಿ ಕುಲಕರ್ಣಿ (ಕವನ), ಚಿನ್ಮಯ ವಿದ್ಯಾಲಯ, ಭವಾನಿ ನಗರ, ಹುಬ್ಬಳ್ಳಿ11 ರಿಂದ 12 ನೇ ತರಗತಿ:- ರಮಿತಾ ಮೂರ್ತಿ (ಕವನ), ಮಹಿಳಾ ಸೇವಾ ಸಮಾಜ, ಕೆ.ಆರ್.ರಸ್ತೆ, ಬೆಂಗಳೂರು- ವರ್ಷ ಶೆಟ್ಟಿ (ಚಿತ್ರಕಲೆ / ರೇಖಾಚಿತ್ರ), ಮೌಂಟ್ ಕಾರ್ಮೆಲ್ ಪಿಯು, ಕಾಲೇಜು, ಬೆಂಗಳೂರು- ಅಫ್ಶಿನ್ ಡಿ (ಚಿತ್ರಕಲೆ / ರೇಖಾಚಿತ್ರ), ಕೇಂದ್ರೀಯ ವಿದ್ಯಾಲಯ, ಬಳ್ಳಾರಿ