* ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು 'ವೀಕ್ಷಿತ್ ಪಂಚಾಯತ್ ಕರ್ಮಯೋಗಿ' ಎಂಬ ಉಪಕ್ರಮವನ್ನು ಆರಂಭಿಸಿದೆ.* ಈ ಉಪಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಆಡಳಿತದಲ್ಲಿ ಅರ್ಥಪೂರ್ಣ ಬದಲಾವಣೆ ತರಲು ತಳಮಟ್ಟದಿಂದ ಸುಧಾರಣೆಗಳನ್ನು ತರಬೇಕು. ಈ ನಿಟ್ಟಿನಲ್ಲಿ 'ವೀಕ್ಷಿತ್ ಪಂಚಾಯತ್ ಕರ್ಮಯೋಗಿ' ಉಪಕ್ರಮವನ್ನು ಜಾರಿಗೆ ತರಲಾಗಿದೆ ಎಂದಿದ್ದಾರೆ.* ಈ ಉಪಕ್ರಮವು ವಿಶಾಲವಾದ 'ಪ್ರಶಸನ್ ಗಾಂವ್ ಕಿ ಔರ್' ಅಭಿಯಾನದ ಭಾಗವಾಗಿದೆ, ಇದು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಆಧುನಿಕ ಉಪಕರಣಗಳು ಮತ್ತು ಜ್ಞಾನವನ್ನು ಒದಗಿಸುವ ಮೂಲಕ ಪರಿಣಾಮಕಾರಿ ನಿರ್ಧಾರ ಮತ್ತು ಯೋಜನೆಗಾಗಿ ತಳಮಟ್ಟದಲ್ಲಿ ಆಡಳಿತವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.* ಜ್ಞಾನದ ಅಂತರವನ್ನು ನಿವಾರಿಸಲು ಇ-ಲರ್ನಿಂಗ್ ಪರಿಕರಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳನ್ನು ನೀಡುವ ಮೂಲಕ ಒಡಿಶಾ, ಅಸ್ಸಾಂ, ಗುಜರಾತ್ ಮತ್ತು ಆಂಧ್ರಪ್ರದೇಶದ ಪಂಚಾಯತ್‌ಗಳ ಸಾಮರ್ಥ್ಯವನ್ನು ಸುಧಾರಿಸಲು ಉಪಕ್ರಮವು ಕೇಂದ್ರೀಕರಿಸುತ್ತದೆ.* ಈ ಯೋಜನೆ ಮೂಲಕ ಪಂಚಾಯಿತಿಗಳಲ್ಲಿಯೂ ವಿವಿಧ ತಾಂತ್ರಿಕ ಪರಿಕರಗಳಾದ ಇ- ಲರ್ನಿಂಗ್ ಪ್ಲಾಟ್‌ಫಾರ್ಮ್, ಎಐ ಚಾಲಿತ ಚಾಟ್ ಬಾಟ್, ಮೊಬೈಲ್ ಅಪ್ಲಿಕೇಶನ್‌ಗಳನ್ನು ಪರಿಚಯಿಸಲಾಗಿದೆ. ಸಚಿವರು ಇದೇ ವೇಳೆ ಕೇಂದ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮಾನಿಟರಿಂಗ್ ವ್ಯವಸ್ಥೆಯ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು. * ಸಾರ್ವಜನಿಕರ ಸೇವೆಗಳಲ್ಲಿ ಪಾರದರ್ಶಕತೆ ತರಲು ಯತ್ನಿಸಲಾಗಿದ್ದು, ವಾರ್ಷಿಕವಾಗಿ 2.5 ಮಿಲಿಯನ್ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ವರದಿ ತಿಳಿಸಿದೆ.