* ವಿದ್ಯುನ್ಮಾನ ಮತಯಂತ್ರ (EVM)ಗಳಲ್ಲಿ ಹೊಸ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ ಮತದಾರರು ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಬಣ್ಣದ ಭಾವಚಿತ್ರವನ್ನು ನೋಡಬಹುದು.* ಈ ವ್ಯವಸ್ಥೆ ಮೊದಲ ಬಾರಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಾರಿಯಾಗಲಿದೆ. ಇದುವರೆಗೆ ಇವಿಎಂಗಳಲ್ಲಿ ಕಪ್ಪು-ಬಿಳುಪು ಫೋಟೋಗಳು ಮಾತ್ರವಿದ್ದವು, ಮತದಾರರಿಗೆ ಗುರುತಿಸಲು ಕಷ್ಟವಾಗುತ್ತಿತ್ತು.* ಈಗ ಅಭ್ಯರ್ಥಿಯ ಭಾವಚಿತ್ರ ಹಾಗೂ ಸರಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಲಾಗುವುದು.* ಫೋಟೋದಲ್ಲಿ ಅಭ್ಯರ್ಥಿಯ ಮುಖವು ಮುಕ್ಕಾಲು ಭಾಗದಲ್ಲಿ ಸ್ಪಷ್ಟವಾಗಿ ಕಾಣುವಂತೆ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ.* ಈ ಬದಲಾವಣೆ 1961ರ ಚುನಾವಣಾ ನಿಯಮಗಳ ಸೆಕ್ಷನ್ 49ಬಿ ಅಡಿಯಲ್ಲಿ ಕೇಂದ್ರ ಚುನಾವಣ ಆಯೋಗದ ತಿದ್ದುಪಡಿ ಪ್ರಕಾರ ಜಾರಿಯಾಗುತ್ತಿದೆ.