* ಅಂತರರಾಷ್ಟ್ರೀಯ “QS Best Student Cities” ಸಮೀಕ್ಷೆಯಲ್ಲಿ ಬೆಂಗಳೂರು ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತ ನಗರಗಳ ಪಟ್ಟಿಯಲ್ಲಿ 22 ಸ್ಥಾನ ಜಿಗಿದು 108ನೇ ಸ್ಥಾನ ಪಡೆದಿದೆ. ಈ ಸಮೀಕ್ಷೆಯಲ್ಲಿ 130 ನಗರಗಳನ್ನು ಅಳೆಯಲಾಗಿದೆ.* ಬೆಂಗಳೂರು ಜೊತೆಗೆ ದೆಹಲಿ, ಮುಂಬೈ ಮತ್ತು ಚೆನ್ನೈ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಮುಂಬೈ 15 ಸ್ಥಾನಗಳ ಜಿಗಿತದಿಂದ 98ನೇ ಸ್ಥಾನ, ದೆಹಲಿ ಏಳು ಸ್ಥಾನ ಜಿಗಿದು 104ನೇ ಸ್ಥಾನ, ಮತ್ತು ಚೆನ್ನೈ 12 ಸ್ಥಾನ ಗಳಿಸಿ 128ನೇ ಸ್ಥಾನದಲ್ಲಿದೆ.* ವಿದ್ಯಾರ್ಥಿಗಳಿಗೂ ಎಟುಕಬಲ್ಲ ನಗರಗಳ ಪಟ್ಟಿಯಲ್ಲಿ ಮುಂಬೈ ಮತ್ತು ಬೆಂಗಳೂರು ಮೊದಲ 15 ನಗರಗಳಲ್ಲಿವೆ. ಈ ವಿಭಾಗದಲ್ಲಿ ಭಾರತವು ಉತ್ತಮ ಸಾಧನೆ ಪ್ರದರ್ಶಿಸಿದೆ.* ಉದ್ಯೋಗ ಅವಕಾಶಗಳ ಅಂಶದಲ್ಲಿ ದೆಹಲಿ ಮತ್ತು ಮುಂಬೈ ಟಾಪ್ 50 ಪಟ್ಟಿಯಲ್ಲಿ ಸೇರಿವೆ. ಬೆಂಗಳೂರು 41 ಸ್ಥಾನ ಜಿಗಿದು 59ನೇ ಸ್ಥಾನ ಪಡೆದುಕೊಂಡಿದೆ.* ದಕ್ಷಿಣ ಕೊರಿಯಾದ ಸಿಯೋಲ್ ಈ ವರ್ಷದ ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ತ ನಗರವಾಗಿ ಪ್ರಥಮ ಸ್ಥಾನಕ್ಕೆ ಏರಿದೆ. ಲಂಡನ್ ಮೂರು ಸ್ಥಾನ ಕುಸಿದು ಮೂರನೇ ಸ್ಥಾನದಲ್ಲಿದೆ.