Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವಿದ್ಯಾರ್ಥಿಗಳ ಪ್ರೇರಣಾದಾಯಕ ದೀಪ: ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ವಿಶ್ವ ವಿದ್ಯಾರ್ಥಿಗಳ ದಿನ
15 ಅಕ್ಟೋಬರ್ 2025
* ವಿಶ್ವದ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ವ್ಯಕ್ತಿಯಾಗಿದ್ದ ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತದ 11ನೇ ರಾಷ್ಟ್ರಪತಿ
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ
ಅವರ ಜನ್ಮ ದಿನವಾದ
ಅಕ್ಟೋಬರ್ 15
ಅನ್ನು ಪ್ರತಿವರ್ಷ “
ವಿಶ್ವ ವಿದ್ಯಾರ್ಥಿಗಳ ದಿನ
”ವೆಂದು ಆಚರಿಸಲಾಗುತ್ತದೆ.
* ಶಿಕ್ಷಣ, ಸಂಶೋಧನೆ ಹಾಗೂ ಯುವಕರ ಶಕ್ತೀಕರಣದ ಕ್ಷೇತ್ರದಲ್ಲಿ ಕಲಾಂ ಅವರ ಮಹತ್ವದ ಕೊಡುಗೆಯನ್ನು ಸ್ಮರಿಸಿ ಈ ದಿನವನ್ನು ಗೌರವಿಸಲಾಗುತ್ತದೆ.
* ಕಲಾಂ ಅವರು ತಮ್ಮ ಜೀವನವನ್ನೆಲ್ಲಾ ವಿದ್ಯಾರ್ಥಿಗಳ ಕಲ್ಯಾಣ, ಶಿಕ್ಷಣದ ಪ್ರೋತ್ಸಾಹ ಹಾಗೂ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು. ಅವರ
“ನಾನು ಶಿಕ್ಷಕನಾಗಿ ನೆನಪಿನಲ್ಲಿರಲು ಬಯಸುತ್ತೇನೆ”
ಎಂಬ ಮಾತು ಅವರ ಶಿಕ್ಷಣ ಪ್ರೇಮವನ್ನು ತೋರಿಸುತ್ತದೆ.
*
2010ರಲ್ಲಿ
ಮೊದಲ ಬಾರಿಗೆ ಅವರ
79ನೇ ಜನ್ಮದಿನದಂದು
ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು.
* ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ಧ್ವನಿಯನ್ನು ಗೌರವಿಸಲು ಪ್ರಥಮ ವಿಶ್ವ ವಿದ್ಯಾರ್ಥಿಗಳ ದಿನವನ್ನು ನವೆಂಬರ್ 17 ರಂದು ಆಚರಿಸಲಾಗುತ್ತಿತ್ತು. ಭಾರತದಲ್ಲಿ ಕಲಾಂ ಅವರ ಜನ್ಮ ದಿನದ ಗೌರವಾರ್ಥ ಅಕ್ಟೋಬರ್ 15 ರಂದು ವಿಶೇಷವಾಗಿ ಆಚರಿಸಲಾಗುತ್ತದೆ.* ವಿದ್ಯಾರ್ಥಿಗಳ ಪ್ರೇರಣಾ ದೀಪವಾಗಿದ್ದ ಕಲಾಂ ಅವರನ್ನು
“ಮಿಸೈಲ್ ಮ್ಯಾನ್ ಆಫ್ ಇಂಡಿಯಾ”
ಎಂದು ಕರೆಯಲಾಗುತ್ತದೆ.* ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಅವರು 2005ರ ಮೇ 23ರಂದು ಸ್ವಿಟ್ಜರ್ಲ್ಯಾಂಡ್ ಭೇಟಿ ನೀಡಿದ್ದರು. ಅವರ ಗೌರವಾರ್ಥವಾಗಿ, ಆ ದಿನವನ್ನು ಅಲ್ಲಿ
ರಾಷ್ಟ್ರೀಯ ವಿಜ್ಞಾನ
ದಿನವೆಂದು ಆಚರಿಸಲಾಗುತ್ತಿದೆ.👉 ಕಲಾಂ ಅವರ ಕನಸು –
“ಯುವಕರಲ್ಲಿ ಶಕ್ತಿಯಿದ್ದರೆ, ರಾಷ್ಟ್ರ ಬದಲಾಗುತ್ತದೆ”
ಎಂಬ ಸಂದೇಶವು ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದೀಪವಾಗಿದೆ.
🌿 ಡಾ. ಎ.ಪಿ.ಜೆ. ಅಬ್ದುಲ್ ಕಲಾಂ – ಸಂಕ್ಷಿಪ್ತ ಜೀವನಚರಿತ್ರೆ :
* ಜನನ:
ಅಕ್ಟೋಬರ್ 15, 1931 – ರಾಮೇಶ್ವರಂ, ತಮಿಳುನಾಡು
* ಮರಣ:
ಜುಲೈ 27, 2015 – ಶಿಲ್ಲಾಂಗ್
* ಹುದ್ದೆ:
ಭಾರತದ 11ನೇ ರಾಷ್ಟ್ರಪತಿ (2002 – 2007)
ಪ್ರಶಸ್ತಿಗಳು:
#
ಪದ್ಮಭೂಷಣ – 1981
# ಪದ್ಮವಿಭೂಷಣ – 1990
# ಭಾರತ ರತ್ನ – 1997
# ಮಾನ್ಯ ಡಾಕ್ಟರೇಟ್ ಪದವಿ: 48 ವಿಶ್ವವಿದ್ಯಾಲಯಗಳಿಂದ
# ಪ್ರಶಸ್ತಿ – ಪುರಸ್ಕಾರಗಳು: 22
📘 ಪ್ರಮುಖ ಕೃತಿಗಳು
* Wings of Fire (ಆತ್ಮಕತೆ – 13 ಭಾಷೆಗಳಿಗೆ ಭಾಷಾಂತರ)
* Ignited Minds
* The Luminous Sparks
* Inspiring Thoughts
* You Are Born to Blossom
Take Quiz
Loading...