* ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಲು ಉದ್ದೇಶಿತ ವಿಧಾನ ಮಂಡಲದ ಚಳಿಗಾಲ ಅಧಿವೇಶನ ಒಂದು ದಿನ ಮೊಟಕುಗೊಂಡಿದೆ.* ಡಿ.9 ರಿಂದ 20ರವರೆಗೆ ನಿಗದಿಯಾಗಿದ್ದ ಅಧಿವೇಶನ 19ರವರೆಗೆ ಮಾತ್ರ ನಡೆಯಲಿದೆ ಎಂದು ಯು.ಟಿ.ಖಾದರ್ ಹೇಳಿದ್ದಾರೆ.* ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರಣಕ್ಕಾಗಿ ವಂದು ದಿನ ಮೊಟಕುಗೊಳಿಸಲಾಗಿದೆ.* ಸಾಹಿತ್ಯ ಸಮ್ಮೇಳನ ಡಿಸೆಂಬರ್ 20 ರಿಂದ 22ರವರೆಗೆ ನಡೆಯಲಿದೆ. ಮುಖ್ಯಮಂತ್ರಿ ಮತ್ತು ಸಚಿವರು ಅದರಲ್ಲಿ ಪಾಲ್ಗೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.* ವಕ್ಫ್ ಮಂಡಳಿ ವಿವಾದ, ಮುಡಾ ನಿವೇಶನಗಳ ಹಂಚಿಕೆ ಅಕ್ರಮ, ಅಬಕಾರಿ ಕಮಿಷನ್ ವಸೂಲಿ, ವರ್ಗಾವಣೆ ದಂಧೆಗೆ ಅಧಿಕಾರಿಯೊಬ್ಬ ಆತ್ಮಹತ್ಯೆ ಅಭಿವೃದ್ಧಿ ಕೆಲಸಗಳು ಸ್ಥಗಿತ ಮುಂತಾದ ವಿಷಯ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವ ನಿರೀಕ್ಷೆಯಿದೆ.* ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ, ಅಭಿವೃದ್ಧಿ ಸೇರಿ ಪ್ರಮುಖ ಯೋಜನೆಗಳ ಚರ್ಚೆ, ಪರಿಹಾರಕ್ಕೆ ವೇದಿಕೆಯಾಗಬೇಕು. ರಾಜಕೀಯ ಮೇಲಾಟ, ಕೆಸರೆರಚಾಟ ಕಡಿಮೆಯಾಗಬೇಕು ಎಂದು ಉತ್ತರ ಕರ್ನಾಟಕದ ಜನರು ನಿರೀಕ್ಷಿಸಿದ್ದಾರೆ.