* ಅಮೆರಿಕದ ಟ್ರಂಪ್ ಆಡಳಿತವು ವಿದೇಶಿ ವಿದ್ಯಾರ್ಥಿಗಳು (F-ವೀಸಾ) ಹಾಗೂ ಮಾಧ್ಯಮ ಪ್ರತಿನಿಧಿಗಳ (I-ವೀಸಾ) ವೀಸಾ ಅವಧಿಗೆ ಮಿತಿ ಹೇರಲು ಹೊಸ ನಿಯಮವನ್ನು ಪ್ರಸ್ತಾಪಿಸಿದೆ. ಇದರ ಉದ್ದೇಶ ಅಕ್ರಮ ವಲಸೆ ಮತ್ತು ವೀಸಾ ದುರುಪಯೋಗವನ್ನು ತಡೆಯುವುದಾಗಿದೆ ಎಂದು ಡಿಎಚ್ಎಸ್ ತಿಳಿಸಿದೆ.* 1978ರಿಂದ ವಿದ್ಯಾರ್ಥಿಗಳಿಗೆ Duration of Status ಎಂಬ ಸೌಲಭ್ಯ ಇದ್ದು, ಮರುಪರಿಶೀಲನೆ ಇಲ್ಲದೇ ಅಮೆರಿಕಾದಲ್ಲಿ ದೀರ್ಘಾವಧಿ ಉಳಿಯಲು ಅವಕಾಶವಿತ್ತು.* ಟ್ರಂಪ್ ಆಡಳಿತ ಪ್ರಕಾರ, ಇದನ್ನು ಕೆಲವರು ದುರುಪಯೋಗಪಡಿಸಿಕೊಂಡು ನಿರಂತರವಾಗಿ ವಿದ್ಯಾರ್ಥಿಗಳಂತೆ ಉಳಿದಿದ್ದಾರೆ.* ಹೊಸ ನಿಯಮ ಪ್ರಕಾರ, ವಿದೇಶಿ ವಿದ್ಯಾರ್ಥಿಗಳು ಹಾಗೂ ಎಕ್ಸ್ಚೇಂಜ್ ವಿಸಿಟರ್ಗಳು ಗರಿಷ್ಠ 4 ವರ್ಷ ಮಾತ್ರ ಉಳಿಯಲು ಅವಕಾಶ ಸಿಗುತ್ತದೆ.* ಮಾಧ್ಯಮ ಪ್ರತಿನಿಧಿಗಳಿಗೆ ಪ್ರಾರಂಭಿಕ ಅವಧಿ 240 ದಿನ, ಅದಾದ ಬಳಿಕ ಮತ್ತೊಂದು 240 ದಿನ ವಿಸ್ತರಣೆ ದೊರೆಯಬಹುದು, ಆದರೆ ಅದು ಅವರ ಕೆಲಸದ ಅವಧಿಯನ್ನು ಮೀರಬಾರದು.