* ಅಮೆರಿಕ ವಿದೇಶಗಳಿಗೆ ನೀಡುವ ಎಲ್ಲ ರೀತಿಯ ನೆರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ವಿದೇಶಗಳಿಗೆ ನೀಡಿದ ಹಣಕಾಸಿನ ನೆರವು ನೀತಿಯನ್ನು ಪುನರ್ವಿಚಾರಿಸುತ್ತಿರುವುದಾಗಿ ಹೇಳಿದೆ.* ‘ಇನ್ನು ಮುಂದೆ ಕುರುಡಾಗಿ ವಿದೇಶಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ ಎಂದು ಅಧ್ಯಕ್ಷ ಟ್ರಂಪ್ ಅವರು ಸ್ಪಷ್ವವಾಗಿ ಹೇಳಿದ್ದಾರೆ. ಏಕೆಂದರೆ ಆ ಹಣ ಅಮೆರಿಕದ ಜನರಿಗೆ ವಾಪಸಾಗುವುದಿಲ್ಲ. ಕಷ್ಟಪಟ್ಟು ದುಡಿದು ತೆರಿಗೆ ಪಾವತಿಸುವ ನಮ್ಮ ಜನರ ಹಣವನ್ನು ವಿದೇಶಗಳಿಗೆ ನೀಡುವ ನೀತಿಯನ್ನು ಪರಿಶೀಲಿಸುವುದು ಸರಿಯಾದ ನಿರ್ಧಾರ ಮಾತ್ರವಲ್ಲದೆ, ನೈತಿಕವಾಗಿ ಅನಿವಾರ್ಯವಾಗಿರುವ ಕ್ರಮವೂ ಆಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಟಾಮಿ ಬ್ರೂಸ್ ಹೇಳಿದ್ದಾರೆ.* ಯುಎಸ್ ಎಐಡಿಯಿಂದ ನೀಡಲಾಗುತ್ತಿದ್ದ ಎಲ್ಲಾ ವಿದೇಶಿ ನೆರವನ್ನು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಪರಿಶೀಲನೆಗಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.* 2023ರಲ್ಲಿ ಯುಎಸ್ ಏಡ್ 158 ದೇಶಗಳಿಗೆ ₹3.88 ಲಕ್ಷ ಕೋಟಿ ನೆರವು ನೀಡಿದ್ದು, ಭಾರತಕ್ಕೆ ₹1,500 ಕೋಟಿ, ಅಫ್ಘಾನಿಸ್ತಾನಕ್ಕೆ ₹8,600 ಕೋಟಿ, ಬಾಂಗ್ಲಾದೇಶಕ್ಕೆ ₹3,450 ಕೋಟಿ, ಮತ್ತು ಪಾಕಿಸ್ತಾನಕ್ಕೆ ₹2,000 ಕೋಟಿ ನೆರವು ನೀಡಿದೆ.* ಕೊಲಂಬಿಯಾ ಅಮೆರಿಕದ ವಲಸಿಗರ ವಿಮಾನಗಳಿಗೆ ಇಳಿಯಲು ತಡೆಯುವುದರಿಂದ, ಡೊನಾಲ್ಡ್ ಟ್ರಂಪ್ ಸುಂಕ ಮತ್ತು ವೀಸಾ ನಿರ್ಬಂಧ ಸೇರಿದಂತೆ ಪ್ರತೀಕಾರ ಕ್ರಮಗಳನ್ನು ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ.* ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಪೆಟ್ರೊ ಅವರ ನಿರ್ಧಾರವು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದ್ದರಿಂದ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ಟ್ರಂಪ್ ಹೇಳಿದ್ದಾರೆ.