* ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ಡಾ. ಕೆ. ಸುಧಾಕರ್ ಅವರು ನೇಮಕಗೊಂಡಿದ್ದಾರೆ.* ಕೇಂದ್ರ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಹಾಗೂ ವಿದೇಶಾಂಗ ಖಾತೆ ರಾಜ್ಯ ಸಚಿವರಾದ ಕೀರ್ತಿವರ್ಧನ್ ಸಿಂಗ್ ಮತ್ತು ಪವಿತ್ರಾ ಮಾರ್ಗರೀಟಾ ಅವರ ನೇತೃತ್ವದ ಈ ಸಲಹಾ ಸಮಿತಿಯಲ್ಲಿ ಲೋಕಸಭೆಯ 10 ಹಾಗೂ ರಾಜ್ಯಸಭೆಯ 9 ಸದಸ್ಯರು, ರಾಜ್ಯಸಭೆಯಿಂದ ಒಬ್ಬರು ವಿಶೇಷ ಆಹ್ವಾನಿತ ಸದಸ್ಯರು ಮತ್ತು ಇಬ್ಬರು ಮಾಜಿ ಅಧಿಕಾರಿಗಳು ಸದಸ್ಯರಾಗಿದ್ದಾರೆ. * ಈ ಸಲಹಾ ಸಮಿತಿಯು ಸರ್ಕಾರದ ವಿದೇಶಾಂಗ ನೀತಿ, ವಿವಿಧ ಯೋಜನೆ, ಕಾರ್ಯಕ್ರಮ ಅನುಷ್ಠಾನದ ವಿಧಾನ ಹಾಗೂ ದೇಶದ ವಿದೇಶಾಂಗಕ್ಕೆ ಸಂಬಂಧಿಸಿದ ವಿಚಾರ ಕುರಿತು ಸೂಕ್ತ ಸಲಹೆ, ಸೂಚನೆ ನೀಡಲಿದೆ.