* ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಸೋಮವಾರ(ನವೆಂಬರ್ 11) ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ(Vikram Misri) ಅವರ ಅಧಿಕಾರಾವಧಿಯನ್ನು 14 ಜುಲೈ 2026ರವರೆಗೆ ವಿಸ್ತರಿಸಿದೆ.* 1989-ಬ್ಯಾಚ್ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಯಾದ ಮಿಸ್ರಿ ಅವರು ನವೆಂಬರ್ 30, 2024 ರಂದು ವಯೋನಿವೃತ್ತಿ ಹೊಂದಬೇಕಿತ್ತು, ಆದಾಗ್ಯೂ, ನೇಮಕಾತಿ ಸಮಿತಿ ಸಾರ್ವಜನಿಕ ಹಿತಾಸಕ್ತಿಯಿಂದ ಈ ವಿಸ್ತರಣೆಗೆ ಸಂಪುಟ ಅನುಮೋದನೆ ನೀಡಿದೆ.* ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಯಾದ ಮಿಶ್ರಿ ಜುಲೈ 15 ರಂದು ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.* ವಿಕ್ರಮ್ ಮಿಶ್ರಿ ಅವರು ಇಂದರ್ ಕುಮಾರ್ ಗುಜ್ರಾಲ್ ಅವರಿಗೆ 1997 ರಿಂದ ಮಾರ್ಚ್ 1998ರವರೆಗೆ, ಮನಮೋಹನ್ ಸಿಂಗ್ ಅವರಿಗೆ ಅಕ್ಟೋಬರ್ 2012 ರಿಂದ ಮೇ 2014ರವರೆಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೇ 2014 ರಿಂದ ಜುಲೈ 2014ರವರೆಗೆ ಖಾಸಗಿ ಕಾರ್ಯದರ್ಶಿಯಾಗಿದ್ದರು. ಇದರ ನಂತರ ಅವರು 2021 ರವರೆಗೆ ಈ ಹುದ್ದೆಯನ್ನು ಮುಂದುವರಿಸಿದರು.* ಜೂನ್ 2020ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಚೀನಾದ ಸೇನೆಯ ನಡುವಿನ ಹಿಂಸಾತ್ಮಕ ಘರ್ಷಣೆಯ ಸಂದರ್ಭದಲ್ಲಿ ವಿಕ್ರಮ್ ಮಿಶ್ರಿ ಉಭಯ ದೇಶಗಳ ನಡುವಿನ ಹಲವಾರು ಸುತ್ತಿನ ಮಾತುಕತೆಗಳಲ್ಲಿ ಭಾಗವಹಿಸಿದರು. ವಿಕ್ರಮ್ ಮಿಶ್ರಿ ಅವರು ಸ್ಪೇನ್ ಮತ್ತು ಮ್ಯಾನ್ಮಾರ್‌ಗೆ ಭಾರತದ ರಾಯಭಾರಿಯಾಗಿದ್ದಾರೆ.* ಅವರ ವೃತ್ತಿಜೀವನದುದ್ದಕ್ಕೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಪ್ರಧಾನ ಮಂತ್ರಿ ಕಚೇರಿ (PMO) ಎರಡರಲ್ಲೂ ವಿವಿಧ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.