* ಸಾರಿಗೆ ಕ್ಷೇತ್ರದ ದಿಗ್ಗಜ ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ.ಆನಂದ ಸಂಕೇಶ್ವರ ಅವರಿಗೆ ದುಬೈನಲ್ಲಿ ನಡೆದ ಸೌತ್ ಇಂಡಿಯಾ ಬಿಸಿನೆಸ್ ಅವಾರ್ಡ್ಸ್ ಪುರಸ್ಕಾರ ಸಂದಿದೆ.* ಈ ಸಮಾರಂಭ ದುಬೈನ ಅಲ್ ಹಬ್ತೂರ್ ಪ್ಯಾಲೇಸ್ನಲ್ಲಿ ನಡೆದಿದ್ದು, ಭಾರತದ ಮಾಜಿ ಯುಎಇ ರಾಯಭಾರಿ ಮತ್ತು ಎಎಜಿ ಚೇರ್ಮನ್ ಡಾ. ಅಹ್ಮದ್ ಅಬ್ದುಲ್ ರೆಹಮಾನ್ ಅಲ್ಬನ್ನಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.* ಪ್ರಶಸ್ತಿ ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ವಲಯದಲ್ಲಿ ಜಾಗತಿಕ ಪ್ರಭಾವ ಬೀರಿದವರನ್ನು ಗುರುತಿಸುತ್ತದೆ. ಇದೇ ಸಂದರ್ಭದಲ್ಲಿ ಸೌತ್ ಪವರ್ಲಿಸ್ಟ್–100 ಅನ್ನು ಬಿಡುಗಡೆ ಮಾಡಲಾಯಿತು.* ಡಾ. ಸಂಕೇಶ್ವರ ಅವರು ವಿಆರ್ಎಲ್ ಸಂಸ್ಥೆಯನ್ನು ಭಾರತದ ಅತಿ ದೊಡ್ಡ ಸಾರಿಗೆ ಕಂಪನಿಯಾಗಿ ಬೆಳೆಸಿದ ಕೊಡುಗೆಗಾಗಿ ಈ ಗೌರವಕ್ಕೆ ಪಾತ್ರರಾದರು. * ಅವರ ಸಾಧನೆ ವ್ಯಾಪಾರದಷ್ಟೇ ಅಲ್ಲ, ದೇಶದ ಲಾಜಿಸ್ಟಿಕ್ಸ್ ಬೆಳವಣಿಗೆ ಮತ್ತು ಏಕೀಕರಣದಲ್ಲಿಯೂ ಮಹತ್ವದ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಆಯೋಜಕರು ಹೇಳಿದರು.* ಸೌತ್ ಪವರ್ಲಿಸ್ಟ್–100ರಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನೂ ಗೌರವಿಸಲಾಗಿದ್ದು, ಅವರ ನಾಯಕತ್ವವು ಜಾಗತಿಕ ವೇದಿಕೆಯಲ್ಲಿ ಭಾರತದ ದೃಷ್ಟಿ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತದೆ ಎಂದು ಎಸ್ಐಬಿಎ ಘೋಷಿಸಿದೆ.