* ವಿಶ್ವ ಕಲಾ ಜಗತ್ತಿನ ಒಲಂಪಿಕ್ಸ್ ಎಂದೇ ಹೆಸರಾದ ವೆನಿಸ್ ಬೈನಾಲೆಯ 60ನೇ ಆವೃತ್ತಿ ಏಪ್ರಿಲ್ 20ರಿಂದ ಪ್ರಾರಂಭವಾಗಲಿದೆ.* ಈ ಅಂತಾರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ 333 ಕಲಾವಿದರು ತಮ್ಮ ಅದ್ಭುತ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ.* ವಿಶ್ವದ ಅತ್ಯಂತ ದೊಡ್ಡ ಮತ್ತು ಪ್ರತಿಷ್ಠಿತ ಕಲಾ ಮೇಳಗಳಲ್ಲಿ ವೆನಿಸ್ ಬೈನಾಲೆ ಕೂಡ ಒಂದು. ಇದರಲ್ಲಿ ಕಲೆಯ ಅತ್ಯಂತ ವಿಶಿಷ್ಟ ಪ್ರಕಾರಗಳು ಅನಾವರಣಗೊಳ್ಳುತ್ತವೆ. ಇದು ಪ್ರತಿವರ್ಷ ಆರು ಲಕ್ಷಕ್ಕೂ ಹೆಚ್ಚು ಹೆಚ್ಚು ಸಂದರ್ಶಕರನ್ನು ಆಕರ್ಷಿಸುತ್ತದೆ.* ಬೈಸಾಲೆ ಎಂದರೇನು?: ಇಟಾಲಿಯನ್ ಪದವಾದ ಬೈನಾಲೆ ಪದದ ಅರ್ಥ 'ಪ್ರತಿವರ್ಷ' ಎಂಬುದಾಗಿದೆಯಾದರೂ ವೆನಿಸ್ ಬೈನಾಲೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಗತ್ತಿನ ಅತಿ ದೊಡ್ಡ ಅಂತಾರಾಷ್ಟ್ರೀಯ ಕಲಾ ಮೇಳವಾಗಿದೆ. ಇದರಲ್ಲಿ ವಿವಿಧ ದೇಶಗಳ ಕಲಾವಿದರು ಸಮಕಾಲೀನ ಕಲೆಗಳನ್ನು ಪ್ರದರ್ಶಿಸುತ್ತಾರೆ. ಇವುಗಳು ಚಿಕ್ಕ ಅಡಿಟಿಪ್ಪಣಿಯೊಂದಿಗೆ (ಕ್ಯುರೇಟೋರಿಯಲ್ ಥೀಮ್‌ನಲ್ಲಿ) ಅನಾವರಣಗೊಳ್ಳುತ್ತವೆ. * ಈ ಮೇಳ ಅಂತಾರಾಷ್ಟ್ರೀಯ ಸನ್ನಿವೇಶದಲ್ಲಿ ಸಮಕಾಲೀನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಚಾರಗಳನ್ನು ಅನ್ವೇಷಿಸಲು ಚೌಕಟ್ಟನ್ನು ಒದಗಿಸುತ್ತದೆ ಎಂದು ಆಸ್ಟ್ರೇಲಿಯಾದ ಕೌನ್ಸಿಲ್ ಆಫ್ ದಿ ಆರ್ಟ್ಸ್ ವರದಿ ಹೇಳಿದೆ.* ವೆನಿಸ್‌ನ ನಗರದ ಸರಕಾರ ಇಟಲಿಯ ರಾಜ ಮೊದಲ ಉಂಬರ್ಟೊ ಮತ್ತು ಸಾವೊಯ್‌ ಮಾರ್ಗರಿಟಾ ಅವರ ಬೆಳ್ಳಿ ಮಹೋತ್ಸವ ನಿಮಿತ್ತ ರಾಷ್ಟ್ರೀಯ ದೈವಾರ್ಷಿಕ ಕಲಾ ಮೇಳ ಆಯೋಜಿಸುವ ಬಗ್ಗೆ 1893ರಲ್ಲಿ ಪ್ರಸ್ತಾಪಿಸಿತು. 1894ರಲ್ಲಿ ಬೈನಾಲೆ ಕಲಾ ಪ್ರದರ್ಶನ ಆಯೋಜನೆಯ ಉದ್ದೇಶವಿತ್ತಾದರೂ ಅಂತಿಮವಾಗಿ ಇದನ್ನು 1895ರ ಏಪ್ರಿಲ್ 30ರಂದು ರಾಜ ಉಂಬರ್ಟೊ ಮತ್ತು ರಾಣಿ ಮಾರ್ಗರಿಟಾ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.