* ಚುನಾವಣಾ ಅಕ್ರಮ ಆರೋಪಗಳು ಕೇಳಿ ಬಂದ ಹೊರತಾಗಿಯೂ ಶುಕ್ರವಾರ (ಜ.10) ವೆನಿಜುವೆಲಾದ ಅಧ್ಯಕ್ಷರಾಗಿ ನಿಕೋಲಸ್ ಮಡುರೊ ಪ್ರಮಾಣ ವಚನ ಸ್ವೀಕರಿಸಿದ್ದಾರೆ.* ನಿಕೋಲಸ್ ಮಡುರೊ ಮೂರನೆಯ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಅಧಿಕಾರಾವಧಿ ಮುಂದಿನ ಆರು ವರ್ಷಗಳವರೆಗೆ ಇರಲಿದೆ.* ಕಳೆದ ಜುಲೈ ತಿಂಗಳಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಕೋಲಸ್ ಮಡುರೊ ಶೇಕಡ 51 ರಷ್ಟು ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಮಂಡಳಿ ಮುಖ್ಯಸ್ಥ ಎಲ್ವಿಸ್ ಅಮೊರೊಸೊ ಘೊಷಣೆ ಮಾಡಿದ್ದರು.* ವಿರೋಧ ಪಕ್ಷದ ನಾಯಕ ಜೌನ್ ಗೈಡೊ ಶೇಕಡ 44 ರಷ್ಟುಗಳಿಸಿ ಪರಾಭವಗೊಂಡಿದ್ದಾರೆ ಎಂದು ಪ್ರಕಟಿಸಿದ್ದರು. * ಈ ಘೋಷಣೆ ಬಳಿಕ ಜೌನ್ ಗೈಡೊ ಅವರು ಚುನಾವಣೆ ಹಾಗೂ ಮತ ಎಣಿಕೆಯಲ್ಲಿ ವ್ಯಾಪಕ ಆಕ್ರಮವಾಗಿದ್ದು ವಿದೇಶಿ ನಾಯಕರು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿದ್ದರು.