* ವೆನೆಜುವೆಲಾ ದೇಶದ ನೂತನ ಅಧ್ಯಕ್ಷರಾಗಿ ನಿಕೋಲಸ್ ಮಡುರೊ ಅವರು ಮೂರನೇ ಬಾರಿಗೆ ನೇಮಕಗೊಂಡಿದ್ದಾರೆ. 2025 ರಿಂದ 2031 ರವರೆಗೆ ದೇಶವನ್ನು ಆಳುತ್ತಾರೆ ಎಂದು ರಾಷ್ಟ್ರೀಯ ಚುನಾವಣಾ ಮಂಡಳಿ (CNE) ಘೋಷಿಸಿತು. * ಮಡುರೊ ಅವರು 5,150,092 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ ಸ್ಥಾನವನ್ನು ಪಡೆದರು, ಯುನಿಟರಿ ಪ್ಲಾಟ್‌ಫಾರ್ಮ್ ಒಕ್ಕೂಟದಿಂದ ವಿರೋಧ ಪಕ್ಷದ ಅಭ್ಯರ್ಥಿ ಎಡ್ಮಂಡೊ ಗೊನ್ಜಾಲೆಜ್ ಉರ್ರುಟಿಯಾ ಅವರು 4,445,978 ಮತಗಳನ್ನುಪಡೆದುಕೊಂಡಿದ್ದಾರೆ. * ನಿಕೋಲಸ್ ಮಡುರೊ ಅವರು 2013 ರಿಂದ ವೆನೆಜುವೆಲಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  * ಮಡುರೊ ಅವರು 2000 ರಲ್ಲಿ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾಗುವ ಮೊದಲು ಟ್ರೇಡ್ ಯೂನಿಯನ್ ನಾಯಕರಾದರು. 2005 ರಿಂದ 2006 ರವರೆಗೆ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಾಗಿ, 2006 ರಿಂದ 2013 ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಮತ್ತು ಚಾವೆಜ್ ಅಡಿಯಲ್ಲಿ 2012 ರಿಂದ 2013 ರವರೆಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.