* ಮಹಿಳೆಯರ ಆರೋಗ್ಯ ಮತ್ತು ಕಾರ್ಯಸ್ಥಳದ (Workplace) ಸೌಹಾರ್ದತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಋತುಚಕ್ರ ರಜೆ ಅಥವಾ ಮುಟ್ಟಿನ ರಜೆ (Menstrual Leave) ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಈ ಮಹತ್ವದ ನಿರ್ಧಾರವು ರಾಜ್ಯದ ಲಕ್ಷಾಂತರ ಉದ್ಯೋಗಸ್ಥ ಮಹಿಳೆಯರಿಗೆ ದೊಡ್ಡ ಮಟ್ಟದ ಪರಿಹಾರವನ್ನು ಒದಗಿಸಲಿದೆ.ಯಾವೆಲ್ಲಾ ವಲಯಗಳಿಗೆ ಮುಟ್ಟಿನ ರಜೆ ಅನ್ವಯ?* ಈ ರಜಾ ಸೌಲಭ್ಯವು ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ರಾಜ್ಯದ ಆರ್ಥಿಕತೆಯ ಪ್ರಮುಖ ವಲಯಗಳಾದ್ಯಂತ ಅನ್ವಯವಾಗುತ್ತದೆ. ಈ ಮೂಲಕ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಇದೇ ಮೊದಲ ಬಾರಿಗೆ ಈ ಸೌಲಭ್ಯವು ದಕ್ಕಲಿದೆ.* ಸರ್ಕಾರಿ ಕಚೇರಿಗಳು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳಾ ಉದ್ಯೋಗಿಗಳು.* ಕೈಗಾರಿಕಾ ವಲಯ: ಗಾರ್ಮೆಂಟ್ಸ್ (Garments), ಇತರ ಖಾಸಗಿ ಕೈಗಾರಿಕಾ ವಲಯಗಳಲ್ಲಿನ ಮಹಿಳೆಯರು.* ಕಾರ್ಪೊರೇಟ್ ವಲಯ: ಬಹುರಾಷ್ಟ್ರೀಯ ಕಂಪನಿಗಳು (MNC) ಮತ್ತು ಮಾಹಿತಿ ತಂತ್ರಜ್ಞಾನ (IT) ವಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ.* ಈ ಸೌಲಭ್ಯವು ಮಹಿಳೆಯರಿಗೆ ತಮ್ಮ ಮುಟ್ಟಿನ ಸಮಯದಲ್ಲಿ ಅನಾರೋಗ್ಯ ಅಥವಾ ಅಸ್ವಸ್ಥತೆ ಇದ್ದಾಗ, ತಮ್ಮ ವೇತನಕ್ಕೆ ಯಾವುದೇ ಧಕ್ಕೆಯಾಗದಂತೆ ವಿಶ್ರಾಂತಿ ಪಡೆಯಲು ಅವಕಾಶ ನೀಡುತ್ತದೆ. ಭಾರತದಲ್ಲಿ ಮುಟ್ಟಿನ ರಜೆಯ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿ* ಭಾರತದಲ್ಲಿ ಮುಟ್ಟಿನ ರಜೆ ಪರಿಕಲ್ಪನೆಯು ಹೊಸದೇನಲ್ಲ, ಆದರೆ ಇದರ ಅನುಷ್ಠಾನವು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದಿದೆ.* ದೇಶದಲ್ಲಿ ಮೊದಲ ಬಾರಿಗೆ ಬಿಹಾರ (Bihar)ರಾಜ್ಯ. 1992 ರಲ್ಲಿ ಜಾರಿಗೆ ತಂದಿತು.ಪ್ರತಿ ತಿಂಗಳು ಎರಡು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸಲಾಗುತ್ತಿದೆ.* ಕೇರಳ (Kerala) 2023 ರಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿ.ವಿದ್ಯಾರ್ಥಿನಿಯರಿಗೆ ಶೇ. 60 ರಷ್ಟು ಹಾಜರಾತಿ ಇದ್ದರೆ, ಮುಟ್ಟಿನ ರಜೆಯೊಂದಿಗೆ ಶೇ. 73 ರಷ್ಟು ಹಾಜರಾತಿ ಸಾಕಾಗುತ್ತದೆ. ಕೇರಳ ಸರ್ಕಾರವು ಕೆಲವು ನಿಬಂಧನೆಗಳೊಂದಿಗೆ ಈ ಸೌಲಭ್ಯವನ್ನು ಜಾರಿಗೊಳಿಸಿದೆ.* ಉತ್ತರ ಪ್ರದೇಶ, ಮಹಾರಾಷ್ಟ್ರ ಕೆಲವು ನಿಬಂಧನೆಗಳು ಅಥವಾ ಆಯ್ದ ಸಂಸ್ಥೆಗಳಲ್ಲಿ ಜಾರಿ ಇದೆ. ದೇಶದ ಪ್ರಮುಖ ರಾಜ್ಯಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಪ್ರತ್ಯೇಕ ನಿಯಮಗಳಿವೆ.