Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ವೇತನ ಸಹಿತ 'ಮುಟ್ಟಿನ ರಜೆ' (Menstrual Leave) ಅನುಮೋದನೆ: ಸಾಮಾಜಿಕ ಕ್ರಾಂತಿಯತ್ತ ಹೆಜ್ಜೆ
9 ಅಕ್ಟೋಬರ್ 2025
* ಮಹಿಳೆಯರ ಆರೋಗ್ಯ ಮತ್ತು ಕಾರ್ಯಸ್ಥಳದ (Workplace) ಸೌಹಾರ್ದತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಋತುಚಕ್ರ ರಜೆ ಅಥವಾ ಮುಟ್ಟಿನ ರಜೆ (Menstrual Leave) ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಈ ಮಹತ್ವದ ನಿರ್ಧಾರವು ರಾಜ್ಯದ ಲಕ್ಷಾಂತರ ಉದ್ಯೋಗಸ್ಥ ಮಹಿಳೆಯರಿಗೆ ದೊಡ್ಡ ಮಟ್ಟದ ಪರಿಹಾರವನ್ನು ಒದಗಿಸಲಿದೆ.
ಯಾವೆಲ್ಲಾ ವಲಯಗಳಿಗೆ ಮುಟ್ಟಿನ ರಜೆ ಅನ್ವಯ?
* ಈ ರಜಾ ಸೌಲಭ್ಯವು ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ರಾಜ್ಯದ ಆರ್ಥಿಕತೆಯ ಪ್ರಮುಖ ವಲಯಗಳಾದ್ಯಂತ ಅನ್ವಯವಾಗುತ್ತದೆ. ಈ ಮೂಲಕ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಇದೇ ಮೊದಲ ಬಾರಿಗೆ ಈ ಸೌಲಭ್ಯವು ದಕ್ಕಲಿದೆ.
* ಸರ್ಕಾರಿ ಕಚೇರಿಗಳು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳಾ ಉದ್ಯೋಗಿಗಳು.
* ಕೈಗಾರಿಕಾ ವಲಯ: ಗಾರ್ಮೆಂಟ್ಸ್ (Garments), ಇತರ ಖಾಸಗಿ ಕೈಗಾರಿಕಾ ವಲಯಗಳಲ್ಲಿನ ಮಹಿಳೆಯರು.
* ಕಾರ್ಪೊರೇಟ್ ವಲಯ: ಬಹುರಾಷ್ಟ್ರೀಯ ಕಂಪನಿಗಳು (MNC) ಮತ್ತು ಮಾಹಿತಿ ತಂತ್ರಜ್ಞಾನ (IT) ವಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ.
* ಈ ಸೌಲಭ್ಯವು ಮಹಿಳೆಯರಿಗೆ ತಮ್ಮ ಮುಟ್ಟಿನ ಸಮಯದಲ್ಲಿ ಅನಾರೋಗ್ಯ ಅಥವಾ ಅಸ್ವಸ್ಥತೆ ಇದ್ದಾಗ, ತಮ್ಮ ವೇತನಕ್ಕೆ ಯಾವುದೇ ಧಕ್ಕೆಯಾಗದಂತೆ ವಿಶ್ರಾಂತಿ ಪಡೆಯಲು ಅವಕಾಶ ನೀಡುತ್ತದೆ.
ಭಾರತದಲ್ಲಿ ಮುಟ್ಟಿನ ರಜೆಯ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿ
* ಭಾರತದಲ್ಲಿ ಮುಟ್ಟಿನ ರಜೆ ಪರಿಕಲ್ಪನೆಯು ಹೊಸದೇನಲ್ಲ, ಆದರೆ ಇದರ ಅನುಷ್ಠಾನವು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದಿದೆ.
* ದೇಶದಲ್ಲಿ ಮೊದಲ ಬಾರಿಗೆ ಬಿಹಾರ (Bihar)ರಾಜ್ಯ. 1992 ರಲ್ಲಿ ಜಾರಿಗೆ ತಂದಿತು.ಪ್ರತಿ ತಿಂಗಳು ಎರಡು ದಿನಗಳ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸಲಾಗುತ್ತಿದೆ.
* ಕೇರಳ (Kerala) 2023 ರಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿ.ವಿದ್ಯಾರ್ಥಿನಿಯರಿಗೆ ಶೇ. 60 ರಷ್ಟು ಹಾಜರಾತಿ ಇದ್ದರೆ, ಮುಟ್ಟಿನ ರಜೆಯೊಂದಿಗೆ ಶೇ. 73 ರಷ್ಟು ಹಾಜರಾತಿ ಸಾಕಾಗುತ್ತದೆ. ಕೇರಳ ಸರ್ಕಾರವು ಕೆಲವು ನಿಬಂಧನೆಗಳೊಂದಿಗೆ ಈ ಸೌಲಭ್ಯವನ್ನು ಜಾರಿಗೊಳಿಸಿದೆ.
* ಉತ್ತರ ಪ್ರದೇಶ, ಮಹಾರಾಷ್ಟ್ರ ಕೆಲವು ನಿಬಂಧನೆಗಳು ಅಥವಾ ಆಯ್ದ ಸಂಸ್ಥೆಗಳಲ್ಲಿ ಜಾರಿ ಇದೆ. ದೇಶದ ಪ್ರಮುಖ ರಾಜ್ಯಗಳು ಈ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಪ್ರತ್ಯೇಕ ನಿಯಮಗಳಿವೆ.
Take Quiz
Loading...