Job Description: * ಭಾರತ ದೇಶದ ಉತ್ತರದ ಗಡಿಭಾಗದಲ್ಲಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ವೈಬ್ರಂಟ್ ವಿಲೇಜಸ್‌ ಪೋಗ್ರಾಂ ಹೆಸರಿನ 4,800 ಕೋಟಿ ರೂ. ಯೋಜನೆಗೆ ಕೇಂದ್ರ ಸಂಪುಟ ಸಮ್ಮತಿಸಿದೆ. * 4,800 ಕೋಟಿ ರೂ.ನಲ್ಲಿ 2,500 ಕೋಟಿ ರೂ.ಗಳನ್ನು ರಸ್ತೆಗಳಿಗೆ ಬಳಸಲಾಗುವುದು. ಉತ್ತರ ಗಡಿಯಲ್ಲಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿಯಿಂದ ಈ ಭಾಗದಲ್ಲಿ ವಾಸಿಸುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. * ಜನರನ್ನು ಹಳ್ಳಿಗಳಲ್ಲೇ ಉಳಿಯುವಂತೆ ಮಾಡಲು ಹಾಗೂ ವಲಸೆ ಹೋಗುವುದನ್ನು ತಡೆಯಲು ಸಹಕಾರಿಯಾಗುವ ಜತೆಗೆ ಗಡಿ ಭದ್ರತೆಯನ್ನು ಹೆಚ್ಚಿಸಲು ಇದು ನೆರವಾಗಲಿದೆ.* 19 ಜಿಲ್ಲೆಗಳು, 46 ಗಡಿ ಬ್ಲಾಕ್ ಗ್ರಾಮಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ, ಜೀವನೋಪಾಯಕ್ಕೆ ಹಲವು ಆಗಲಿದ್ದು, 2025ರ ಅಂತ್ಯಕ್ಕೆ ಅವಕಾಶಗಳನ್ನು ತೆರೆಯಲಿದೆ. ಕಾಮಗಾರಿ ಪೂರ್ಣಗೊಳ್ಳುವ ಮೊದಲ ಹಂತದಲ್ಲಿ 663 ಗ್ರಾಮಗಳಲ್ಲಿ ಯೋಜನೆ ಜಾರಿ ಮಾಡಲಾಗುವದು.