* ಏರ್ ಮಾರ್ಷಲ್ ನರ್ಮದೇಶ್ವರ್ ತಿವಾರಿ ಅವರು ಭಾರತೀಯ ವಾಯುಪಡೆ (ಐಎಎಫ್)ಯ ಉಪವಾಯುಪಡೆ ಮುಖ್ಯಸ್ಥರಾಗಿ ಮೇ 02 ರಂದು ಅಧಿಕಾರ ಸ್ವೀಕರಿಸಿದ್ದಾರೆ.* ಮೂರುದಶಕಗಳಿಗಿಂತ ಹೆಚ್ಚು ಸೇವಾ ಅನುಭವ ಹೊಂದಿರುವ ತಿವಾರಿ ಅವರು ಅಧಿಕಾರ, ಕಾರ್ಯಾಚರಣಾ ಪರಿಣಿತಿ, ವಿಮಾನ ಪರೀಕ್ಷಾ ಪರಿಣತಿ ಹಾಗೂ ಪರಿಣಾಮಕಾರಿ ನಾಯಕತ್ವದಲ್ಲಿ ಪರಿಣತಿ ಹೊಂದಿದ್ದಾರೆ.* ಡೆಹ್ರಾಡೂನ್ನ ರಾಷ್ಟ್ರೀಯ ಇಂದಿರಾ ಸೇನಾ ಶಾಲೆ ಮತ್ತು ಎನ್ಡಿಎ ಖಡಕ್ವಾಸಲಾ ವಿದ್ಯಾಭ್ಯಾಸ ಪಡೆದ ಅವರು 1986ರಲ್ಲಿ ಫೈಟರ್ ಪೈಲಟ್ ಆಗಿ ಐಎಎಫ್ಗೆ ಸೇರ್ಪಡೆಗೊಂಡರು.* ಅಧ್ಯಕ್ಷರ ಚಿನ್ನದ ಪದಕ ವಿಜೇತರಾಗಿರುವ ಅವರು, ಯುಎಸ್ನ ಎರ್ ಕಮ್ಯಾಂಡ್ ಅಂಡ್ ಸ್ಟಾಫ್ ಕಾಲೇಜ್ ಸೇರಿದಂತೆ ಹಲವು ಪ್ರತಿಷ್ಠಿತ ಮಿಲಿಟರಿ ವಿದ್ಯಾ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದಾರೆ.* ಏರ್ ಮಾರ್ಷಲ್ ತಿವಾರಿಯ ಪ್ರಮುಖ ಕೊಡುಗೆಗಳಲ್ಲಿ ಕಾರ್ಗಿಲ್ ಯುದ್ಧದಲ್ಲಿ ‘ಲೈಟನಿಂಗ್’ ಲೇಸರ್ ಡಿಸಿಗ್ನೇಶನ್ ಪಾಡ್ ಬಳಕೆಯಲ್ಲಿ ನಿರ್ಣಾಯಕ ಪಾತ್ರ, ಎಲ್ಸಿಎ ತೇಜಸ್ ಪರೀಕ್ಷಾ ಕಾರ್ಯಗಳಲ್ಲಿ ನಾಯಕತ್ವ ಹಾಗೂ ಪ್ಯಾರಿಸ್ನ ಏರ್ ಅಟ್ಯಾಶೆ ಆಗಿ ಅಂತಾರಾಷ್ಟ್ರೀಯ ಸೇನಾ ಬಾಂಧವ್ಯವನ್ನು ಬಲಪಡಿಸುವ ಕೆಲಸ ಸೇರಿವೆ. ಅವರು 3600ಕ್ಕೂ ಹೆಚ್ಚು ಗಂಟೆಗಳ ಹಾರಾಟ ಅನುಭವ ಹೊಂದಿದ್ದಾರೆ.* ಅವರ ನೇತೃತ್ವದಲ್ಲಿ ಭಾರತೀಯ ವಾಯುಪಡೆಗೆ ತಂತ್ರಜ್ಞ ಆಧುನೀಕರಣ, ಸಮರಸಿದ್ಧತೆ ಮತ್ತು ಸ್ವದೇಶಿ ರಕ್ಷಣಾ ಸಾಮರ್ಥ್ಯದ ಬೆಳವಣಿಗೆಯಲ್ಲಿ ಹೊಸ ದಿಕ್ಕು ಸಿಗಲಿದೆ.