* ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ವಾಯುಪಡೆಯ ನೂತನ ಮುಖ್ಯಸ್ಥರಾಗಿ ಸೆಪ್ಟೆಂಬರ್ 28 ರಂದು ಅಧಿಕಾರ ಸ್ವೀಕರಿಸಿದ್ದಾರೆ. ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರಿಂದ ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.* ಇನ್ನೂ ಏರ್ ಮಾರ್ಷಲ್ ಎಸ್ಪಿ ಧಾರ್ಕರ್ (ಸುಜೀತ್ ಪುಷ್ಪಾಕರ್ ಧಾರ್ಕರ್) ಅವರು ಭಾರತೀಯ ವಾಯುಪಡೆಯ ಮುಂದಿನ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. * ಅಮರ್ ಪ್ರೀತ್ ಸಿಂಗ್ ಅವರು 5,000 ಗಂಟೆಗಳ ಯುದ್ಧ ವಿಮಾನ ಹಾರಾಟದ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ಐಎಎಫ್ ಆಯೋಜಿಸಿದ್ದ ಬಹುರಾಷ್ಟ್ರೀಯ ಯುದ್ಧ ವಿಮಾನಗಳ ಕಸರತ್ತು `ತರಂಗ್ ಶಕ್ತಿ' ಆಯೋಜಿಸುವಲ್ಲಿ ಸಿಂಗ್ ಅವರು ಪ್ರಮುಖ ಪಾತ್ರ ವಹಿಸಿದ್ದರು.* ಪರೀಕ್ಷಾ ಪೈಲಟ್ ಆಗಿ ಮಾಸ್ಕೋದಲ್ಲಿ ಮಿಗ್-29 ಅಪ್‍ಗ್ರೇಡ್ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ರಾಷ್ಟ್ರೀಯ ವಿಮಾನ ಪರೀಕ್ಷಾ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿದ್ದರು (ವಿಮಾನ ಪರೀಕ್ಷೆ) ಮತ್ತು ಲಘು ಯುದ್ಧ ವಿಮಾನ ತೇಜಸ್‍ನ ಹಾರಾಟ ಪರೀಕ್ಷೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.