* ‘ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ’ (NCAP) ವರದಿ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿದರೂ, ವಾಯುಮಾಲಿನ್ಯ ತಡೆಗೆ ಯಶಸ್ವಿ ಪ್ರಯತ್ನಗಳಿಂದ ಇಂದೋರ್ ಅಗ್ರ ಸ್ಥಾನ ಪಡೆದಿದೆ.* ಪ್ರತಿ ವರ್ಷವು ಎನ್ಸಿಎಪಿ ದೇಶದ ಹಲವಾರು ನಗರಗಳ ಗಾಳಿಯ ಗುಣಮಟ್ಟವನ್ನು ಪರಿಶೀಲಿಸುತ್ತದೆ. ಈ ಪರಿಶೀಲನೆಗಾಗಿ ನಗರಗಳನ್ನು 10 ಲಕ್ಷಕ್ಕೂ ಅಧಿಕ, 3-10 ಲಕ್ಷ, 3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳು ಮೂರು ವಿಭಾಗಗಳಾಗಿ ವಿಂಗಡಿಸಿಕೊಂಡಿದೆ. * 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಇಂದೋರ್ ಮೊದಲ ಸ್ಥಾನ, ಮಧ್ಯಪ್ರದೇಶದ ಜಬಲ್ಪುರ ಎರಡನೇ ಸ್ಥಾನ, ಉತ್ತರ ಪ್ರದೇಶದ ಆಗ್ರಾ ಮತ್ತು ಸೂರತ್ ಮೂರನೇ ಸ್ಥಾನ ಪಡೆದಿವೆ.* 3–10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಮಹಾರಾಷ್ಟ್ರದ ಅಮರಾವತಿ ಮೊದಲ, ಉತ್ತರ ಪ್ರದೇಶದ ಝಾನ್ಸಿ–ಮೊರಾದಾಬಾದ್ ಎರಡನೇ, ರಾಜಸ್ಥಾನದ ಅಲ್ವರ್ ಮೂರನೇ ಸ್ಥಾನ ಗಳಿಸಿವೆ.* 3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ಪಟ್ಟಣಗಳಲ್ಲಿ ಮಧ್ಯಪ್ರದೇಶದ ದೇವಾಸ್ ಮೊದಲ, ಹಿಮಾಚಲ ಪ್ರದೇಶದ ಪರ್ವಾನೋ ಎರಡನೇ ಮತ್ತು ಒಡಿಶಾದ ಅನುಗುಲ್ ಮೂರನೇ ಸ್ಥಾನ ಪಡೆದಿವೆ.* ಕರ್ನಾಟಕದ ಯಾವುದೇ ನಗರವು ಮೂರೂ ವಿಭಾಗಗಳ ಮೊದಲ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬೆಂಗಳೂರು 31ನೇ ಸ್ಥಾನದಿಂದ 36ನೇ ಸ್ಥಾನಕ್ಕೆ ಕುಸಿದಿದೆ.* ಕಲವು ನಗರಗಳು ಕೈಗಾರಿಕಾ ಕೇಂದ್ರಗಳಾಗಿವೆ. ಕಲ್ಲಿದ್ದಲು ಗಣಿಗಾರಿಕೆಯನ್ನೂ ಹೊಂದಿವೆ. ಆದರೂ, ವಾಯುಮಾಲಿನ್ಯವನ್ನು ತಡೆಯುವಲ್ಲಿ ಸಫಲವಾಗಿವೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.